ನೊಂದ ಮಹಿಳೆಯರಿಗೆ ನೆರವು ನೀಡಲಿದೆ ಸಖಿ ಒನ್‌ಸ್ಟಾಪ್ ಸೆಂಟರ್

Update: 2020-02-17 17:05 GMT

ಉಡುಪಿ, ಫೆ.17: ‘ಸಖಿ’ ಒನ್‌ಸ್ಟಾಪ್ ಸೆಂಟರ್ ಕೇಂದ್ರ ಸರಕಾರದ ಯೋಜನೆಯಾಗಿದ್ದು, 2016ರ ಮಾರ್ಚ್ 1ರಿಂದ ಕಾರ್ಯಾರಂಭ ಮಾಡಿದೆ. ಈ ಕೇಂದ್ರವು ಪ್ರಸ್ತುತ ಉಡುಪಿ ಜಿಲ್ಲೆಯ ನಿಟ್ಟೂರು ರಾಜ್ಯ ಮಹಿಳಾ ನಿಲಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಮಾಜದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ, ಆಪ್ತ ಸಮಾಲೋಚನೆ, ಪೋಲಿಸ್ ನೆರವು, ಕಾನೂನು ಸಲಹೆ/ನೆರವು, ಅಲ್ಪಾವಧಿ ವಸತಿ ಮುಂತಾದ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಕೇಂದ್ರವು ಸಹಕಾರಿಯಾಗಿದೆ.

ಉದ್ದೇಶ: ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಮಗ್ರ ನೆರವು ಮತ್ತು ಬೆಂಬಲವನ್ನು ಒಂದೇ ಸೂರಿನಡಿ ಒದಗಿಸಿಕೊಡುವುದು, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಪೋಲಿಸ್ ನೆರವು, ಕಾನೂನು ನೆರವು, ಸಮಾಲೋಚನೆ ಮತ್ತು ಅಲ್ಪಾವಧಿ ವಸತಿ ಮುಂತಾದ ಸೌಲ್ಯಗಳನ್ನು ಒದಗಿ ಸುವುದು ಈ ಯೋಜನೆಯ ಉದ್ದೇಶವಾಗಿದೆ.

ದೊರೆಯುವ ಸೇವೆಗಳು: ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ, ಆರಕ್ಷಕ ನೆರವಿನೊಂದಿಗೆ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲು, ಆಪ್ತ ಸಮಾಲೋಚನೆ, ಕಾನೂನು ಸಲಹೆ ಮತ್ತು ನೆರವು, ಸುರಕ್ಷಿತ ಅಲ್ಪಾವಧಿ ವಸತಿ ಸೌಲ್ಯವು ಈ ಕೇಂದ್ರದಲ್ಲಿ ದೊರೆಯುತ್ತದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಖಿ ಒನ್‌ಸ್ಟಾಪ್ ಸೆಂಟರ್, ನಿಟ್ಟೂರು ಉಡುಪಿ ಜಿಲ್ಲೆ, ದೂರವಾಣಿ ಸಂಖ್ಯೆ: 0820-2987592, ಉಚಿತ ಮಹಿಳಾ ಸಹಾಯವಾಣಿ:181, Email:wcdsakhiudupi@gmail.com ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿ: ದೂ.ಸಂಖ್ಯೆ: 0820-2574978 /2574972, ಶಿಶು ಅಭಿವೃದ್ಧಿ ಯೋಜನೆ, ಉಡುಪಿ ದೂ.ಸಂಖ್ಯೆ: 0820-2524055, ಶಿಶು ಅಭಿವೃದ್ಧಿ ಯೋಜನೆ, ಬ್ರಹ್ಮಾವರ ದೂ.ಸಂಖ್ಯೆ: 0820-2562244, ಶಿಶು ಅಭಿವೃದ್ಧಿ ಯೋಜನೆ, ಕುಂದಾಪುರ ದೂ.ಸಂಖ್ಯೆ: 08254-230807, ಶಿಶು ಅಭಿವೃದ್ಧಿ ಯೋಜನೆ, ಕಾರ್ಕಳ ದೂ.ಸಂಖ್ಯೆ: 08258-230992 ನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News