×
Ad

ಟಿ.ಆರ್.ಎಫ್. ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ, ಶಿಕ್ಷಕರಿಗೆ ಅಭಿನಂದನಾ ಸಮಾರಂಭ

Update: 2020-02-17 22:46 IST

ಮಂಗಳೂರು : ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ ಜಿಲ್ಲೆ ಇದರ ಜಂಟಿ ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ 22 ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮತ್ತು ಮಂಗಳೂರಿನ ಸುಮಾರು 40 ಶಾಲೆಗಳಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯವಾರು ತರಬೇತಿ ಕಾರ್ಯಗಾರ ಇತ್ತೀಚೆಗೆ ನಡೆಯಿತು.

ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢ ಶಾಲೆಗಳಾದ ಸುಜೀರು, ನಂದಾವರ, ಕೊಡಂಗೆ, ಸಜಿಪನಡು, ಸಜಿಪಮೂಡ, ಕುಕ್ಕಾಜೆ, ಮಂಚಿ, ಗೋಳ್ತಮಜಲು, ನಾರ್ಶ ಮೈದಾನ, ಸುರಿಬೈಲು, ಮುಡಿಪು, ಕಾಡುಮಠ, ಸಾಲೆತ್ತೂರು, ವಗ್ಗ, ಕಾವಳಕಟ್ಟೆ, ಮಣಿನಾಲ್ಕೂರು, ನಾವೂರು, ಮೊಂಟೆಪದವು ಮತ್ತು ಅನುದಾನಿತ ಪ್ರೌಢ ಶಾಲೆಗಳಾದ ಅಲ್ ಮದೀನ ಮಂಜನಾಡಿ, ಪಂಚದುರ್ಗಾ ಕಕ್ಕೆಬೀಡು, ಶ್ರೀ ಶಾರದ ಪಾಣೆ ಮಂಗಳೂರು ಹಾಗೂ ಮಂಗಳೂರು ದಕ್ಷಿಣ ವಲಯದ ಸರಕಾರಿ ಪ್ರೌಢ ಶಾಲೆಗಳಾದ ಕಣ್ಣೂರು, ಮೂಡುಶೆಡ್ಡೆ, ಬಬ್ಬುಕಟ್ಟೆ, ಅಂಬ್ಲಮೊಗರು, ಮೇಲಂಗಡಿ, ನಾಟೆಕಲ್, ತಲಪಾಡಿ, ಸೋಮೆಶ್ವರ ಉಚ್ಚಿಲ, ದೇರಳಕಟ್ಟೆ, ಕಲ್ಲಟ್ಟ, ಕೊಣಾಜೆ ಪದವು, ಪಾವೂರು, ನ್ಯೂಪಡ್ಪು ಮತ್ತು ಅನುದಾನಿತ ಪ್ರೌಢ ಶಾಲೆಗಳಾದ ರಾಮಕೃಷ್ಣ ಹರೇಕಳ, ಮದನಿ ಹಳೇಕೋಟೆ, ಮದನಿ ಅಳೇಕಳ, ಸೆಬಾಸ್ಟಿಯನ್ ಪೆರ್ಮನ್ನೂರು, ಫಲಾಹ್ ತಲಪಾಡಿ, ರಾಜೇಶ್ವರಿ ಮೇರ್ಲಪದವು, ಆದರ್ಶ ಭಾರತಿ ಕರ್ಮಾರ್, ಸೈಂಟ್ ಜೊಸೆಫ್ ಪಕ್ಕಲಡ್ಕ, ಟಿಪ್ಪು ಸುಲ್ತಾನ್ ಕೋಟೆಪುರ, ಸೈಂಟ್ ಜೋಸೆಫ್ ಕಂಕನಾಡಿ, ಭಾರತ್ ಉಳ್ಳಾಲ ಮತ್ತು ಮಂಗಳೂರು ಉತ್ತರ ವಲಯದ ಸರಕಾರಿ ಪ್ರೌಢ ಶಾಲೆಗಳಾದ ಕಾಟಿಪಳ್ಳ 7ನೇ ವಿಭಾಗ, ಸೂರಿಜೆ, ಕಾಟಿಪಳ್ಳ 5ನೇ ವಿಭಾಗ, ಜೋಕಟ್ಟೆ, ಅಂಗರಗುಂಡಿ, ಬೈಕಂಪಾಡಿ, ಬೆಂಗ್ರೆ ಕಸಬಾ, ಬಂದರು, ಮತ್ತು ಅನುದಾನಿತ ಪ್ರೌಢ ಶಾಲೆಗಳಾದ ಶ್ರೀ ನಾರಯಣ ಗುರು, ಬದ್ರಿಯ ಕಂದಕ್, ಮುಂತಾದ ಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದರು.

ಈ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಇಂಗ್ಲೀಷ್ ಮತ್ತು ಸಮಾಜ ವಿಜ್ಞಾನ ವಿಷಯಗಳ ಜೊತೆಗೆ ಪ್ರೇರಣಾ ತರಗತಿಯನ್ನು ನಡೆಸಿಕೊಟ್ಟ ಶಿಕ್ಷಕರಿಗೆ ಅಭಿನಂದನಾ ಸಮಾರಂಭವು ಶನಿವಾರ ಅಪರಾಹ್ನ ಟ್ಯಾಲೆಂಟ್ ಸಭಾಂಗಣ ಕಂಕನಾಡಿಯಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನುಎಮ್.ಪಿ ಜ್ಞಾನೇಶ್ ಕ್ಷೇತ್ರ ಶಿಕ್ಷಣಾಧಿಕಾರಿ (ಬಿ.ಇ.ಒ) ಬಂಟ್ವಾಳ, ಇವರು ನೆರವೇರಿಸಿ ಶಿಕ್ಷಕರಿಗೆ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಜ್ಯೋತಿ ಲೋಕೆಶ್ ಶಿಕ್ಷಣ ಸಂಯೋಜಿಕಿ ಮಂಗಳೂರು ದಕ್ಷಿಣ ವಲಯ, ವಿಶ್ವನಾಥ್ ಗೌಡ ಶಿಕ್ಷಣ ಸಂಯೋಜಿಕರು ಮಂಗಳೂರು ಉತ್ತರ ವಲಯ, ಸುಶೀಲ ಶಿಕ್ಷಣ ಸಂಯೋಜಿಕಿ ಬಂಟ್ವಾಳ ತಾಲೂಕು. ಕೆ.ಎಮ್.ಕೆ ಮಂಜನಾಡಿ, ಸುಲೈಮಾನ್ ಶೇಕ್ ಬೇಳುವಯಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ವಹಿಸಿದ್ದರು. ರಿಯಾಝ್ ಅಹ್ಮದ್ ಕಣ್ಣೂರು ಸ್ವಾಗತಿಸಿದರು. ಮುಹಮ್ಮದ್ ಯು.ಬಿ ಪ್ರಾಸ್ತವಿಕವಾಗಿ ಮಾತನಾಡಿದರು. ಹುಸೈನ್ ಬಡಿಲ ವಂದಿಸಿದರು. ನಕಾಶ್ ಬಾಂಬಿಲ ಪ್ರಶಸ್ತಿ ವಿತರಣೆ ಕಾರ್ಯವನ್ನು ನಿರ್ವಹಿಸಿದ್ದರು. ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಮಜೀದ್ ತುಂಬೆ ಮತ್ತು ಹಕೀಮ್ ಬಜಾಲ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News