ಕಾಸರಗೋಡು : ಅಮಾನ್ಯಗೊಂಡ 43.50 ಲಕ್ಷ ರೂ. ಮೌಲ್ಯದ ನೋಟು ಸಹಿತ ಓರ್ವ ಸೆರೆ

Update: 2020-02-18 10:22 GMT

ಕಾಸರಗೋಡು : ಅಮಾನ್ಯಗೊಂಡ 500 ರೂ. ಮುಖಬೆಲೆಯ ಸುಮಾರು 43.50 ಲಕ್ಷ ರೂ. ಸಹಿತ ಓರ್ವನನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಂದು ಕಾರನ್ನು ವಶಪಡಿಸಿಕೊಂಡಿದ್ದು , ಇನ್ನಿಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನನ್ನು ಪೆರ್ಲ ಉಕ್ಕಿನಡ್ಕದ ಮುಹಮ್ಮದ್ (60) ಎಂದು ಗುರುತಿಸಲಾಗಿದೆ . ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ನಿನ್ನೆ ರಾತ್ರಿ ನಗರ ಹೊರವಲಯದ ವಿದ್ಯಾನಗರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈ ದಾರಿಯಾಗಿ ಬಂದ ಸ್ವಿಫ್ಟ್ ಕಾರನ್ನು  ತಪಾಸಣೆ 
ನಡೆಸಿದಾಗ ನೋಟುಗಳು ಪತ್ತೆಯಾಗಿವೆ. ಬೆಂಗಾವಲಾಗಿ ಬಂದ ಕಾರಿನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ನೋಟುಗಳನ್ನು ಎಲ್ಲಿಗೆ ಸಾಗಿಸುತ್ತಿ ದ್ದುದಾಗಿ ವಿಚಾರಣೆ ಬಳಿಕವಷ್ಟೇ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರಾರಿಯಾದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹಣದ ಮೂಲ ಎಲ್ಲಿ ಹಾಗೂ ಹಣವನ್ನು ಎಲ್ಲಿಗೆ  ಕೊಂಡೊಯ್ಯಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News