ಕೊಣಾಜೆ: ಜೆಸಿಐ ಪದಗ್ರಹಣ ಸಮಾರಂಭ

Update: 2020-02-18 10:25 GMT

ಕೊಣಾಜೆ: ಕೊಣಾಜೆ ಮಂಗಳಗಂಗೋತ್ರಿ ಜೆಸಿಐ ಪ್ರಾಂತ್ಯ ಡಿ' ವಲಯ 15 ಇದರ ನೂತನ ಪದಾಧಿಕಾರಿಗಳ‌ ಪದವಿ ಪ್ರದಾನ ಸಮಾರಂಭ ಅಸೈಗೋಳಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಮಾಜ ಸೇವಕ ಟಿ.ಎಸ್ . ಅಬ್ದುಲ್ಲಾ ಸಾಮಾಣಿಗೆ ಅವರು, ಜೆಸಿಐ ಸಮಾಜದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅಲ್ಲದೆ ಪ್ರಮುಖವಾಗಿ‌ ಈ ಸಂಘಟನೆಯಲ್ಲಿ ಶಿಕ್ಷಕರೇ ಹೆಚ್ಚಾಗಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ವಲಯ ನಿಕಟಪೂರ್ವ ಉಪಾಧ್ಯಕ್ಷ ಅಶೋಕ್ ಚೂಂತಾರ್ ಮಾತನಾಡಿ, ಹಲವು ಯುವನಾಯಕರಿಗೆ ಶಿಸ್ತುಬದ್ಧ ತರಬೇತಿ ನೀಡಿ ನಾಯಕತ್ವ ಗುಣಗಳನ್ನು ಬೆಳೆಸುವ ಮುಖಾಂತರ ಸಮಾಜ, ದೇಶಕ್ಕೆ ಸತ್ಪ್ರಜೆಗಳನ್ನು ನೀಡುವ ಕಾರ್ಯದಲ್ಲಿ ಜೆಸಿಐ ಮುಂಚೂಣಿಯಲ್ಲಿದೆ ಎಂದು  ಅಭಿಪ್ರಾಯಪಟ್ಟರು. 

ಜೆಸಿಐ ವಲಯಾಧ್ಯಕ್ಷ ಪ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಮಾತನಾಡಿ, ಸಮಾಜಸೇವೆ, ನಾಯಕತ್ವ ತರಬೇತಿ ನೀಡುವ ಮುಖಾಂತರ ಸತ್ಪ್ರಜೆಗಳನ್ನು ಸೃಷ್ಟಿಸುವ ಜೆಸಿಐ ಇತರ ಸಂಘಸಂಸ್ಥೆಗಿಂತ ಭಿನ್ನವಾಗಿದೆ. ಸಂಘದ ಮುಖಾಂತರ ಸಾಕಷ್ಟು ನಾಯಕರು ಹುಟ್ಟಿಕೊಂಡಿದ್ದು, ಅಂತಹ ಸೇವೆ ಮುಂದುವರಿಸಲಾಗುವುದು ಎಂದು ತಿಳಿಸಿದರು. ‌

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿರುವ ಅವಳಿ ಜವಳಿ ಮಕ್ಕಳಾದ ಶಮಾ ಮತ್ತು ಕ್ಷೇಮಾ ಅವರಿಗೆ ದಿ.ರತ್ನ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೆಸಿಐ ರಾಷ್ಟ್ರೀಯ ಕಾರ್ಯನಿರ್ವಾಹಕ ನಿಕಟಪೂರ್ವ ಉಪಾಧ್ಯಕ್ಷ ಜೆಎಂಎಫ್ ಅನಿಲ್ ಕುಮಾರ್,‌ ಲೋಕೇಶ್ ರೈ.ಕೆ., ಮಂಗಳಗಂಗೋತ್ರಿ ಜೆಸಿಐ ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಡಿಸೋಜ ಮಜಿಕಟ್ಟ, ಪದಾಧಿಕಾರಿಗಳಾದ ಅಬೂಬಕ್ಕರ್, ಲವೀನ ದಾಂತಿ, ರತ್ನಾಕರ್, ರವೀಂದ್ರ ರೈ ಕಲ್ಲಿಮಾರ್, ಆನಂದ ಕೆ.ಅಸೈಗೋಳಿ, ಜುಬೈದಾ, ಬಾದುಷಾ ಸಾಂಬಾರ್ ತೋಟ,  ಡಾ.ಪ್ರಶಾಂತ್ ನಾಯ್ಕ್ ಉಪಸ್ಥಿತರಿದ್ದರು.

ಜೆಸಿಐ ನಿಕಟಪೂರ್ವ ಅಧ್ಯಕ್ಷೆ ಪವಿತ್ರ ಗಣೇಶ್ ಸ್ವಾಗತಿಸಿದರು. ‌ತ್ಯಾಗಂ‌ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ‌ಶಿಕ್ಷಕ ರವಿಶಂಕರ್ ನೂತನ ಅಧ್ಯಕ್ಷರನ್ನು ಪರಿಚಯಿಸಿದರು. ಕಾರ್ಯದರ್ಶಿ ಪ್ರತಿಮಾ ಹೆಬ್ಬಾರ್ ವಂದಿಸಿದರು. ನಿಕಟಪೂರ್ವ ಅಧ್ಯಕ್ಷ ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News