ಯೆನೆಪೋಯ ಪೌಂಡೇಶನ್‍ನಿಂದ ವಿವಿಧ ಕೋರ್ಸ್‍ಗಳಿಗೆ ಸ್ಕಾಲರ್ ಶಿಪ್

Update: 2020-02-18 12:32 GMT

ಕೊಣಾಜೆ: ಯೆನೆಪೋಯ ಮೊಯ್ದಿನ್ ಕುಂಞಿ ಮೆಮೋರಿಯಲ್ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ ಘಟಕವಾಗಿರುವ ಯೆನೆಪೋಯ ಫೌಂಡೇಶನ್ 2020-2021ರ ಶೈಕ್ಷಣಿಕ ವರ್ಷದಲ್ಲಿ ಮಂಗಳೂರಿನ ಯೆನೆಪೋಯ ಅಡಿಯಲ್ಲಿ ಈ ಕೆಳಗಿನ ಕೋರ್ಸ್‍ಗಳಿಗೆ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರಾಯೋಜಿಸಲು ಪ್ರಸ್ತಾಪಿಸಿದೆ.

ಬಿಡಿಎಸ್, ಬಿಎಸ್ಸಿ ನರ್ಸಿಂಗ್, ಬಿಪಿಟಿ, ಬಿ ಫಾರ್ಮ/ ಡಿ ಫಾರ್ಮ್, ಬಿಎಸ್ಸಿ ಪ್ಯಾರಾ ಮೆಡಿಕಲ್ ಕೋರ್ಸ್‍ಗಳು, ಬಿಎಎಂಎಸ್, ಬಿಎಚ್‍ಎಂಎಸ್, ಬಿ.ಕಾಂ/ ಬಿಬಿಎ / ಬಿಸಿಎ, ಬಿಎಚ್‍ಎ, ಬಿಪಿಎಚ್, ಬಿಎಸ್ಸಿ ಹಾಸ್ಪಿಟಾಲಿಟಿ ಸಾಯನ್ಸ್, ಬಿಎಸ್ಸಿ ಕ್ಲಿನಿಕಲ್ ಸೈಕಾಲಜಿ, ಬಿಎಸ್ಸಿ ಫೋರೆನ್ಸಿಕ್ ಸಾಯನ್ಸ್ ಕೋರ್ಸ್‍ಗಳಾಗಿವೆ.

ಅಭ್ಯರ್ಥಿಗಳ ಆಯ್ಕೆ ಮೆರಿಟ್ ಕಂ ವಿಧಾನಗಳ ಆಧಾರದ ಮೇಲೆ ಇರುತ್ತದೆ. ಮೌಲ್ಯ ಮಾಪನ ಮಾಡುವಾಗ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಭ್ಯರ್ಥಿಯ ವಿಧಾನಗಳ ಮೌಲ್ಯ ಮಾಪನವನ್ನು ಅಯ್ಕೆಗೆ ಅರ್ಹ ಅಭ್ಯರ್ಥಿಗೆ ಸಂಬಂಧಿಸಿದಂತೆ  ಮಾತ್ರ ಮಾಡಲಾಗುತ್ತದೆ.

ಗ್ರೇಡ್ 10, ಗ್ರೇಡ್ 11/ ಪ್ರಥಮ ಪಿ. ಯು. ಸಿ ಮತ್ತು  ದ್ವಿತೀಯ ಪಿ. ಯು. ಸಿ ಯ ಪೂರ್ವ ಸಿದ್ದತಾ  ಪರೀಕ್ಷೆ/  ಮಧ್ಯಾವಧಿ ಪರೀಕ್ಷೆಯಲ್ಲಿ ಶೇ. 80 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಗ್ರೇಡ್  12 / ದ್ವಿತೀಯ ಪಿ. ಯು. ಸಿ ಅಂಕಗಳನ್ನು  ನಂತರ ಸಲ್ಲಿಸಬಹುದು.

ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಮುಸ್ಲಿಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಸರಳ ಪತ್ರಿಕೆಯಲ್ಲಿ  ದಿ, ಸೆಕ್ರೆಟರಿ, ಯೆನೆಪೋಯ ಮೊಯ್ದಿನ್ ಕುಂಞಿ ಮೆಮೋರಿಯಲ್ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್, ಯೆನೆಪೋಯ ವಿಶ್ವವಿದ್ಯಾಲಯ , ದೇರಳ ಕಟ್ಟೆ , ಮಂಗಳೂರು - 575018ಗೆ ಪೂರ್ಣ ವಿಳಾಸ ಮತ್ತು ಸಂಪರ್ಕ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಪಾಸ್‍ಪೋರ್ಟ್ ಗಾತ್ರದ ಭಾವಚಿತ್ರ, ಶಾಲೆ, ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿದ ಪರೀಕ್ಷೆಗಳ ಅಂಕಪಟ್ಟಿಯ ನಕಲು ಪ್ರತಿಯನ್ನು ಲಗತ್ತಿಸಬೇಕು. ಕೋರ್ಸ್‍ಗಳ ಕುರಿತು ಹೆಚ್ಚಿನ ವಿವರಗಳು www.yenepoya.edu.in. ವೆಬ್ ಸೈಟ್‍ನಲ್ಲಿ ಲಭ್ಯವಿರುತ್ತದೆ.  ಅರ್ಜಿ ಸಲ್ಲಿಸಲು ಮಾ.15ಕೊನೆಯ ದಿನಾಂಕ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 0824 - 2206000 ವಿಸ್ತರಣೆ - 5039.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News