×
Ad

ದುಬೈ: ಕಟ್ಟಡದಿಂದ ಬಿದ್ದು ಭಾರತೀಯ ಇಂಜಿನಿಯರ್ ಸಾವು

Update: 2020-02-18 19:20 IST

ದುಬೈ, ಫೆ. 18: 25 ವರ್ಷದ ಭಾರತೀಯ ಇಂಜಿನಿಯರ್ ಒಬ್ಬರು ದುಬೈಯಲ್ಲಿ ಅಪಾರ್ಟ್‌ಮೆಂಟೊಂದರಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಕೇರಳ ನಿವಾಸಿಯಾಗಿರುವ ಸಬೀಲ್ ರಹ್ಮಾನ್ ತನ್ನ ಕೆಲಸದ ಸ್ಥಳದ ಸಮೀಪದಲ್ಲಿರುವ ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಬಿದ್ದರು ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ. ಅವರು 2018ರಿಂದ ದುಬೈಯಲ್ಲಿ ವಾಸಿಸುತ್ತಿದ್ದರು.

ಮಲಪ್ಪುರಂ ಜಿಲ್ಲೆಯ ತಿರೂರ್‌ನಲ್ಲಿರುವ ಮನೆಗೆ ಪಾರ್ಥಿವ ಶರೀರವನ್ನು ಸಾಗಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಸಾಮಾಜಿಕ ಕಾರ್ಯಕರ್ತ ನಾಸೀರ್ ವತನಪಳ್ಳಿ, ಸಬೀಲ್ ರಹ್ಮಾನ್ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.

‘‘ಪ್ರಕರಣ ಸ್ವಲ್ಪ ಗೊಂದಲಮಯವಾಗಿದೆ. ತನ್ನ ಕೆಲಸದ ಸ್ಥಳದ ಪಕ್ಕದ ಕಟ್ಟಡಕ್ಕೆ ಅವರು ಯಾಕೆ ಹೋಗಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ’’ ಎಂದು ನಾಸೀರ್ ವತನಪಳ್ಳಿ ಹೇಳಿದರು.

‘‘ಅವರು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಅವರ ಕುಟುಂಬಕ್ಕೆ ತಿಳಿದಿಲ್ಲ. ಆನ್‌ಲೈನ್‌ನಲ್ಲಿ ಖರೀದಿಸಿದ ಹೊಸ ಮೊಬೈಲ್ ಫೋನನ್ನು ಪಡೆದುಕೊಳ್ಳುವಂತೆ ಅವರು ತನ್ನ ಸಹೋದರನಿಗೆ ಸೂಚಿಸಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಅವರಿಗೆ ಯವುದೇ ಕಾರಣವಿರಲಿಲ್ಲ’’ ಎಂದರು.

ಹೆತ್ತವರ ನಾಲ್ವರು ಮಕ್ಕಳಲ್ಲಿ ರಹ್ಮಾನ್ ಕಿರಿಯವರಾಗಿದ್ದರು. ‘‘ಕಾನೂನು ವಿದಿವಿಧಾನಗಳು ಮುಗಿದ ಬಳಿಕ, ಮೃತದೇಹವನ್ನು ನಾವು ಅವರ ಮನೆಗೆ ಕಳುಹಿಸುತ್ತೇವೆ’’ ಎಂದು ರಶೀದಿಯ ಪೊಲೀಸರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News