×
Ad

‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿ ಇನ್ನೂ 88 ಮಂದಿಗೆ ಸೋಂಕು

Update: 2020-02-18 19:40 IST

ಟೋಕಿಯೊ (ಜಪಾನ್), ಫೆ. 18: ಜಪಾನ್ ಕರಾವಳಿಯಲ್ಲಿ ಲಂಗರು ಹಾಕಿರುವ ಪ್ರವಾಸಿ ಹಡಗಿನಲ್ಲಿ ಹೊಸದಾಗಿ 88 ಮಂದಿಯಲ್ಲಿ ಕೊರೋನವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಪಾನ್‌ನ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಇದರೊಂದಿಗೆ ‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿರುವವರ ಪೈಕಿ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 542ಕ್ಕೆ ಏರಿದೆ. ಹೊಸದಾಗಿ 681 ಮಂದಿಯನ್ನು ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ 88 ಮಂದಿಯಲ್ಲಿ ಮಾರಕ ರೋಗದ ಸೋಂಕು ಇರುವುದು ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News