ಅಮೆರಿಕದ ವೈದ್ಯಕೀಯ ಉಪಕರಣಗಳ ಮೇಲಿನ ಸುಂಕ ಮನ್ನಾ ಮಾಡಿದ ಚೀನಾ

Update: 2020-02-18 14:12 GMT

 ಬೀಜಿಂಗ್, ಫೆ. 18: ಅಮೆರಿಕದ ಆಯ್ದ ವೈದ್ಯಕೀಯ ಉಪಕರಣಗಳ ಆಮದಿನ ಮೇಲೆ ವಿಧಿಸಿರುವ ಹೆಚ್ಚುವರಿ ತೆರಿಗೆಯನ್ನು ಮಾರ್ಚ್ 2ರಿಂದ ಮನ್ನಾ ಮಾಡಲು ಚೀನಾ ನಿರ್ಧರಿಸಿದೆ. ನೂತನ-ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಲು ಶ್ರಮಿಸುತ್ತಿರುವಂತೆಯೇ ಚೀನಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಚೀನಾದಲ್ಲಿ ವೈದ್ಯಕೀಯ ಉಪಕರಣಗಳ ತೀವ್ರ ಕೊರತೆ ತಲೆದೋರಿದೆ.

ಚೀನಾದಲ್ಲಿ 72,000ಕ್ಕೂ ಅಧಿಕ ಮಂದಿ ಕೊರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ ಹಾಗೂ 1,800ಕ್ಕೂ ಅಧಿಕ ಮಂದಿ ರೋಗಕ್ಕೆ ಬಲಿಯಾಗಿದ್ದಾರೆ.

ತೆರಿಗೆ ವಿನಾಯಿತಿಗೆ ಒಳಗಾಗಿರುವ ಸಲಕರಣೆಗಳೆಂದರೆ ರೋಗಿಗಳ ಮೇಲೆ ನಿಗಾ ಇಡುವ ಸಲಕರಣೆಗಳು (ಪೇಶಂಟ್ ಮೋನಿಟರ್‌ಗಳು), ರಕ್ತ ವರ್ಗಾವಣೆ ಸಲಕರಣೆಗಳು ಮತ್ತು ರಕ್ತದೊತ್ತಡವನ್ನು ಅಳೆಯುವ ಉಪಕರಣಗಳು ಎಂದು ಸರಕಾರಿ ಮಂಡಳಿಯ ಸುಂಕ ಆಯೋಗ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ತಿಳಿಸಲಾಗಿದೆ.

‘‘ಚೀನಾದ ನಾಗರಿಕರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News