ಕೊರೋನವೈರಸ್: 1,800 ದಾಟಿದ ಸಾವಿನ ಸಂಖ್ಯೆ

Update: 2020-02-18 14:14 GMT

ಬೀಜಿಂಗ್, ಫೆ. 18: ಚೀನಾದಲ್ಲಿ ಕಾಣಿಸಿಕೊಂಡಿರುವ ನೂತನ-ಕೊರೋನವೈರಸ್ ಸೋಂಕಿನಿಂದಾಗಿ ದೇಶದಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ 1,800ನ್ನು ದಾಟಿದೆ. ಸಾಂಕ್ರಾಮಿಕದ ಕೇಂದ್ರಬಿಂದುವಾಗಿರುವ ಹುಬೈ ರಾಜ್ಯದಲ್ಲಿ ಕಳೆದ ಒಂದು ದಿನದ ಅವಧಿಯಲ್ಲಿ 93 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

 ಅದೇ ವೇಳೆ, ಹೊಸದಾಗಿ 1,807 ಮಂದಿಯಲ್ಲಿ ಕೋವಿಡ್-19 (ನೂತನ-ಕೊರೋನವೈರಸ್‌ಗೆ ವಿಶ್ವ ಆರೋಗ್ಯ ಸಂಸ್ಥೆಯು ಇಟ್ಟ ಹೊಸ ಹೆಸರು) ಸೋಂಕು ಪತ್ತೆಯಾಗಿದೆ ಎಂದು ರಾಜ್ಯದ ಆರೋಗ್ಯ ಆಯೋಗ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ಈ ಸಂಖ್ಯೆಯು ಆಯೋಗವು ಸೋಮವಾರ ಘೋಷಿಸಿದ ಸಂಖ್ಯೆಗೆ ಹೋಲಿಸಿದರೆ ಕಡಿಮೆಯಾಗಿದೆ.

ಮಂಗಳವಾರ ಘೋಷಿಸಲಾದ ಸಾವಿನ ಸಂಖ್ಯೆಯೂ ಸೋಮವಾರ ಪ್ರಕಟಿಸಲಾದ ಸಂಖ್ಯೆಗಿಂತ ಕಡಿಮೆಯಾಗಿದೆ.

ಈಗ ಚೀನಾದ್ಯಂತ 72,300ಕ್ಕೂ ಅಧಿಕ ಮಂದಿ ಕೊರೋನವೈರಸ್ ಸೋಂಕಿಗೆ ತುತ್ತಾಗಿದ್ದಾರೆ.

ನೂತನ-ಕೊರೋನವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ‘ಎಷ್ಟು ಸಾಧ್ಯವೋ ಅಷ್ಟು ತೀವ್ರವಾಗಿ’ ಹೋರಾಡುವಂತೆ ವಿಶ್ವ ಆರೋಗ್ಯ ಸಂಸ್ಥೆಯು ದೇಶಗಳಿಗೆ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News