ಜೈಲಿನಲ್ಲಿ ಅಸಾಂಜ್ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ:ವಕ್ತಾರ

Update: 2020-02-18 15:37 GMT

ಲಂಡನ್, ಫೆ. 18: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ಈಗ ಜೈಲಿನ ಏಕಾಂಗಿ ಕೊಠಡಿಯಲ್ಲಿ ಇರಿಸಲಾಗುತ್ತಿಲ್ಲ ಹಾಗೂ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಅವರ ಸಹೋದ್ಯೋಗಿ ಮತ್ತು ವಕ್ತಾರ ಕ್ರಿಸ್ಟೀನ್ ಹ್ರಾಫನ್ಸನ್ ಮಂಗಳವಾರ ತಿಳಿಸಿದ್ದಾರೆ.48 ವರ್ಷದ ಅಸಾಂಜ್ ಈಗ ಲಂಡನ್‌ನ ಜೈಲಿನಲ್ಲಿದ್ದುಕೊಂಡು, ತನ್ನನ್ನು ಗಡಿಪಾರು ಮಾಡುವಂತೆ ಕೋರಿ ಅಮೆರಿಕ ಸಲ್ಲಿಸಿರುವ ಮನವಿಯ ವಿರುದ್ಧ ಹೋರಾಡುತ್ತಿದ್ದಾರೆ. ಸರಕಾರದ ಕಂಪ್ಯೂಟರ್‌ಗಳಿಗೆ ಕನ್ನ ಹಾಕಲು ಪಿತೂರಿ ಹೂಡಿದ ಮತ್ತು ಬೇಹುಗಾರಿಕೆ ಕಾನೂನು ಉಲ್ಲಂಘಿಸಿದ ಆರೋಪಗಳು ಸೇರಿದಂತೆ ಒಟ್ಟು 18 ಆರೋಪಗಳನ್ನು ಎದುರಿಸುತ್ತಿದ್ದಾರೆ.

''ನಾನು ಅವರನ್ನು 10 ದಿನಗಳ ಹಿಂದೆ ನೋಡಿದೆ. ಅವರನ್ನು ಏಕಾಂಗಿ ಕೊಠಡಿಯಿಂದ ಹೊರತರಲು ಅವರ ವಕೀಲರ ತಂಡ, ಸಾರ್ವಜನಿಕರು ಹಾಗೂ ಆಶ್ಚರ್ಯವೆಂಬಂತೆ ಬೆಲ್ಮರ್ಶ್‌ನಲ್ಲಿರುವ ಅವರ ಜೈಲಿನ ಸಹ ಕೈದಿಗಳು ಮಾಡಿದ ಪ್ರಯತ್ನಗಳಿಂದಾಗಿ ಅವರ ಪರಿಸ್ಥಿತಿ ಸುಧಾರಿಸಿದೆ'' ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹ್ರಾಫನ್ಸನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News