ಪಲಿಮಾರು ಸ್ವಾಮೀಜಿಗೆ ಗುರುವಂದನಾ ಕಾರ್ಯಕ್ರಮ

Update: 2020-02-18 15:42 GMT

ಉಡುಪಿ, ಫೆ.18: ನಮ್ಮ ಪೂರ್ವಜರು ಜಲಸಂರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಅಂದಿನ ಅಗ್ರಹಾರಗಳು, ಶಿವಳ್ಳಿ ಬ್ರಾಹ್ಮಣರ ಜನಜೀವನ, ಅವಿಭಕ್ತ ಕುಟುಂಬಗಳು ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ಎಲ್ಲ ರೊಂದಿಗೆ ಸಾಮರಸ್ಯದೊಂದಿಗೆ ಬದುಕುವ ವಿಶೇಷ ಗುಣ ನಮ್ಮಲ್ಲಿದೆ ಎಂದು ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ತುಳು ಶಿವಳ್ಳಿ ಮಾದ್ವ ಬ್ರಾಹ್ಮಣ ಮಹಾಮಂಡಲ ವತಿಯಿಂದ ಮಂಗಳ ವಾರ ಪಲಿಮಾರು ಮಠದ ಸಭಾಂಗಣದಲ್ಲಿನಡೆದ ಗುರುವಂದನೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮಹಾಮಂಡಲ ಅಧ್ಯಕ್ಷ ಅರವಿಂದ ಆಚಾರ್ಯ, ಕಾರ್ಯದರ್ಶಿ ರವಿ ಪ್ರಕಾಶ್, ಉದ್ಯಮಿ ರಂಜನ್ ಕಲ್ಕೂರ, ದ.ಕ. ಕಸಾಪ ಅಧ್ಯಕ್ಷ ಪ್ರದೀಪ್ ಕಲ್ಕೂರ, ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ಬಾಲಾಜಿ ರಾಘವೆಂದ್ರ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News