ವಸ್ತ್ರ ವಿನ್ಯಾಸ ಬಿಡುವಿನ ವೇಳೆಯಲ್ಲಿ ಆದಾಯ ತರುವ ಹವ್ಯಾಸ: ವೀಣಾ

Update: 2020-02-18 16:03 GMT

ಉಡುಪಿ, ಫೆ.18: ವಸ್ತ್ರ ವಿನ್ಯಾಸದ ತರಬೇತಿಯಿಂದ ಮಹಿಳೆಯರು ಮನೆಯಲ್ಲಿದ್ದೇ ಬಿಡುವಿನ ವೇಳೆಯಲ್ಲಿ ಆದಾಯ ತರುವ ಹವ್ಯಾಸವಾಗಿ ಮಾಡಿಕೊಳ್ಳಬಹುದು ಎಂದು ಸಿಡಿಪಿಓ ವೀಣಾ ಕಿವಿಮಾತು ಹೇಳಿದ್ದಾರೆ.

ಮಣಿಪಾಲದ ಬಿವಿಟಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ವಾರಗಳ ಉಚಿತ ವಸ್ತ್ರವಿನ್ಯಾಸ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡುತಿದ್ದರು.

ಮಹಿಳೆಯರು ವಸ್ತ್ರ ವಿನ್ಯಾಸ ತರಬೇತಿ ಪಡೆದು ಮನೆಯಲ್ಲಿ ಬಿಡು ಸಮಯದಲ್ಲಿ ಮನೆಗೆ ಬೇಕಾದುದನ್ನು ಹೊಲಿದುಕೊಳ್ಳುವುದರ ಜೊತೆಗೆ ಮನೆಯ ಸುತ್ತಮುತ್ತಲಿನವರಿಗೂ ಕಲಿಸಿಕೊಡಬಹುದು ಹಾಗೂ ಹೊಲಿದು ಕೊಟ್ಟು ಆದಾಯ ಗಳಿಸಬಹುದು ಎಂದರು.

ತರಬೇತಿಯಲ್ಲಿ 22 ಮಹಿಳೆಯರು ಭಾಗವಹಿಸಿದ್ದರು.ಆರಂಭದಲ್ಲಿ ತಮ್ಮಲ್ಲಿ ಕೆಲವರಿಗೆ ಯಂತ್ರ ಮೆಟ್ಟಲು ಗೊತ್ತಿಲ್ಲದಿದ್ದರೂ ಸಂಪನ್ಮೂಲ ವ್ಯಕ್ತಿ ಮುಕ್ತಾ ಹಾಗೂ ಇತರ ಸ್ನೇಹಿತರ ನೆರವಿನಿಂದ ಕಲಿತು, ವಿವಿಧ ಶೈಲಿಯ ಬಟ್ಟೆಗಳನ್ನು ಹೊಲಿಯಲು ಕಲಿತೆವು. ತರಬೇತಿಯ ಜೊತೆಗೆ ಜೀವನದ ಬಗ್ಗೆಯೂ ನೀಡಿದ ಮಾರ್ಗದರ್ಶನ ತುಂಬಾ ಉತ್ತಮವಾಗಿತ್ತು ಎಂದುಅಭ್ಯರ್ಥಿಗಳು ಅಭಿಪ್ರಾಯ ಪಟ್ಟರು.

ಬಿವಿಟಿಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ಸಂಪನ್ಮೂಲ ವ್ಯಕ್ತಿ ಮುಕ್ತಾ, ಸಂಸ್ಥೆಯ ಮನೋಹರ ಕಟ್ಗೇರಿ, ಐ.ಜಿ.ಕಿಣಿ, ಪ್ರತಿಮಾ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News