ಯುವಕ ನಾಪತ್ತೆ

Update: 2020-02-18 16:27 GMT

ಉಡುಪಿ, ಫೆ.18: ವಿಪರೀತ ಕುಡಿಯುವ ಚಟ ಹೊಂದಿದ್ದ, ಮಲ್ಪೆಯ ವಿಜಯ ಕರ್ಕೇರ ಅವರ ಲೈಲ್ಯಾಂಡ್ ಬೋಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ, ಕಾಪುವಿನ ಪೊಲಿಪು ಸರಕಾರಿ ಶಾಲೆಯ ಬಳಿ ನಿವಾಸಿ ಮಂಜುನಾಥ (30) ಎಂಬವರು ಫೆ.9ರಂದು ಬೆಳಗಿನ ಜಾವ 3 ಗಂಟೆಗೆ ಬೋಟ್ ಕೆಲಸಕ್ಕೆ ಹೋಗಲು ಇದೆ ಎಂದು ಹೇಳಿ ಹೋದವರು ಕೆಲಸಕ್ಕೂ ಹೋಗದೇ, ವಾಪಾಸು ಮನೆಗೂ ಬಾರದೇ ಕಾಣೆಯಾಗಿದ್ದಾರೆ.

ಚಹರೆ: 5 ಅಡಿ 4 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತುಳು, ತೆಲುಗು, ತಮಿಳು, ಹಿಂದಿ, ನೇಪಾಳ ಬಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಮೊಬೈಲ್: 9480805449 ಗೆ ಮಾಹಿತಿ ನೀಡುವಂತೆ ಕಾಪು ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News