ಫೆ. 20: ಭಾರತದಲ್ಲಿ ‘ಸ್ಟಾರ್ಟ್ ಅಪ್ಸ್’ ಕುರಿತು ಸಮ್ಮೇಳನ

Update: 2020-02-18 17:06 GMT

ಮಂಗಳೂರು, ಫೆ.18: ಎಂಎಸ್‌ಎನ್‌ಎಂ ಬೆಸೆಂಟ್ ಇನ್ಸ್‌ಟಿಟ್ಯೂಟ್ ಆಫ್ ಪಿಜಿ ಸ್ಟಡೀಸ್ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಸಹಯೋಗದೊಂದಿಗೆ ಭಾರತದಲ್ಲಿ ಸ್ಟಾರ್ಟ್ ಅಪ್‌ಗಳ ಕುರಿತು ‘ಸವಾಲುಗಳು, ಸಮಸ್ಯೆಗಳು ಮತ್ತು ಅವಕಾಶಗಳು’ ಎಂಬ ವಿಷಯದಲ್ಲಿ ಫೆ.20ರಂದು ಬೊಂದೆಲ್‌ನ ಎಂಎಸ್‌ಎನ್‌ಎಂ ಬೆಸೆಂಟ್ ಕ್ಯಾಂಪಸ್‌ನಲ್ಲಿರುವ ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ.

ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ.ಎ.ಎಂ.ಖಾನ್ ಅಂದು ಬೆಳಗ್ಗೆ 9:30ಕ್ಕೆ ಸಮ್ಮೇಳನ ಉದ್ಘಾಟಿಸಲಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಉಪ ಗವರ್ನರ್ ವಿಟ್ಟಲ್ದಾಸ್ ಲೀಲಾಧರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸ್ವಾಸ್ತಿಕ್ ಪದ್ಮಾ, ಬಾಬಿ ಪೌಲಿ, ಗೌರಂಗ್ ಶೆಟ್ಟಿ, ಡಾ. ಮದನ್‌ ಮೋಹನ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News