ಬ್ಯಾಂಕಿಂಗ್ ಕ್ಷೇತ್ರದ ಬದಲಾವಣೆ ಸೂಕ್ತ ದಾರಿಯಲ್ಲಿ ಸಾಗಲಿ : ಅರುಂಧತಿ ಭಟ್ಟಾಚಾರ್ಯ

Update: 2020-02-18 17:22 GMT

ಮಂಗಳೂರು, ಫೆ.18:ಬ್ಯಾಂಕಿಂಗ್ ಕ್ಷೇತ್ರದ ತಾಂತ್ರಿಕತೆ,ಡಿಜಿಟಲ್  ಪ್ರವೇಶದಿಂದಾಗಿರುವ ಬದಲಾವಣೆ ಸೂಕ್ತವಾದ ದಾರಿಯಲ್ಲಿ ಸಾಗಬೇಕಾ ಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ತಿಳಿಸಿದ್ದಾರೆ.

ಕರ್ಣಾಟಕ ಬ್ಯಾಂಕ್ ಸಂಸ್ಥಾಪಕ ದಿನಾಚರಣೆಯ ಅಂಗವಾಗಿ ನಗರದ ಕಂಕನಾಡಿ ಕರ್ಣಾಟಕ ಬ್ಯಾಂಕ್ ಆಡಿಟೋರಿಯಂನಲ್ಲಿಂದು ಹಮ್ಮಿಕೊಂಡ ಕಾರ್ಯಕ್ರಮ ದಲ್ಲಿ ಉಪನ್ಯಾಸ ನೀಡಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನದ ಬೆಳವ ಣಿಗೆ ಸಾಕಷ್ಟು ಅನುಭವದ ಆಧಾರದಲ್ಲಿ ಬೆಖೆದು ಬಂದಿದೆ.ತಾಂತ್ರಿಕ ತೆಯೊಂದಿಗೆ ಬೆಳೆದು ಬಂದ ಕ್ರತಕ ಬುದ್ದಿಮತ್ತೆ ಮಾನವ ನಿರ್ಮಿತ ಅನುಭವಕ್ಕೆ  ಸರಿಸಾಟಿಯಾಗ ದು.ಬ್ಯಾಂಕಿಂಗ್  ಕ್ಷೇತ್ರವಿಂದು ಬದಲಾವಣೆ ಯ ಯುಗದಲ್ಲಿದೆ.ಇಂಟರ್ ನೆಟ್ ಬ್ಯಾಂಕಿಂಗ್  ಮೊಬೈಲ್ ಬ್ಯಾಂಕಿಂಗ್  ಯುಗವನ್ನು ದಾಟಿ ಡಿಜಿಟಲ್ ಬ್ಯಾಂಕಿಂಗ್  ಯುಗದಲ್ಲಿ ನಾವಿದ್ದೇವೆ. ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೇ 90 ಕ್ರತಕ ಬುದ್ದಿಮತ್ತೆಯ ಪ್ರದೇಶವಾಗಿದೆ. ಈ ಸಂದರ್ಭದಲ್ಲಿ ನಾವು ನಮ್ಮ ಜ್ಞಾನ ವನ್ನು ಪುನಾರಾವಲೋಕನ ಮಾಡಿ ಕೊಳ್ಳಬೇಕಾಗಿದೆ. ಮುಂದೆ ಡಿಜಿಟಲ್ ಬ್ಯಾಂಕಿಂಗ್  ಕ್ಷೇತ್ರವನ್ನು ನಾವು ಹೆಚ್ಚು ಅವಲಂಬಿಸಿದಂತೆ ಬ್ಯಾಂಕ್ ಉದ್ಯೋಗಿಗಳು ತಮ್ಮ ವ್ರತಗತಿ ಯಲ್ಲಿ ಬ್ಯಾಂಕಿನ ಮಾರ್ಗದ ರ್ಶಿಗಳಾಗಿ ಕಾರ್ಯ ನಿರ್ವಹಿಸ ಬೇಕಾಗುತ್ತದೆ. ಬ್ಯಾಂಕಿಂಗ್  ಕ್ಷೇತ್ರದ ಡಿಜಿಟಲ್  ಹಾದಿ  ವೆಚ್ಚದಾಯಕವೂ ಹೌದು ಎಂದು ಅರುಂಧತಿ ಭಟ್ಟಾಚಾರ್ಯ ತಿಳಿಸಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರಿಯಾದ ಮಾರ್ಗ ದಲ್ಲಿ ಸರಿಯಾದ ರೀತಿಯಲ್ಲಿ ತಂತ್ರಜ್ಞಾನ ವನ್ನು ಬಳಸಿದರೆ ಸೂಕ್ತವಾದ ಫಲಿತಾಂಶ ಪಡೆಯಲು ಸಾಧ್ಯ ಎಂದು ಅರುಂಧತಿ ಭಟ್ಟಾಚಾ ರ್ಯ ತಿಳಿಸಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನದ ಪ್ರವೇಶದಿಂದ ಸಾಕಷ್ಟು ಸಕಾರಾತ್ಮಕ ಬದಲಾವಣೆ ಗಳಾಗಿವೆ.ಜನಧನ್ ಯೋಜನೆಯ ಯಂತಹ ಯೋಜನೆ ಯನ್ನು ಸಾಕಷ್ಟು ಜನರಿಗೆ ತ್ವರಿತವಾಗಿ ತಲುಪಿಸಲು ಸಾಧ್ಯ ವಾಗಿದೆ.ಬ್ಯಾಂಕಿಂಗ್ ವ್ಯವಹಾರ ಗಳಿಂದ ದೂರವಿದ್ದ ಜನರಿಗೂ ಬ್ಯಾಂಕಿಂಗ್ ಸೌಲಭ್ಯಗಳನ್ನು ನೀಡಲು ಅವರನ್ನು ಒಳಗೊ ಳ್ಳುವಂತೆ ಮಾಡಲು ಸಾಧ್ಯವಾಗಿದೆ. ತಂತ್ರಜ್ಞಾನದ ಪ್ರವೇಶದಿಂದಾಗಿ ನಮ್ಮ ದೈನಂದಿನ ಬದುಕಿನಲ್ಲಿ ಕೆಲವು ನಕಾರಾತ್ಮಕ ಘಟನೆಗಳಿಗೂ ಕಾರಣವಾಗಿದೆ.ನಮ್ಮ ಖಾಸಗಿ ತನವನ್ನು ಕಳೆದು ಕೊಳ್ಳುವ ಸ್ಥಿತಿ,ಕೆಲವು ಸೈಬರ್ ಕ್ರೈಮ್ ನ ಘಟನೆಗಳು ನಡೆಯುತ್ತವೆ.ಕೇವಲ ಬೆರಳಚ್ಚಿನ ಆಧಾರದ ಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸುವ ಸಂದರ್ಭದಲ್ಲಿ ಅವು ಹೋಲಿಕೆ ಯಾಗದೆ, ಸರ್ವರ್ ಸಮಸ್ಯೆ ಯಿಂದ ಗ್ರಾಹಕರು ಸಮಸ್ಯೆ ಎದುರಿಸುತ್ತಾರೆ.ಇಂತಹ ಘಟನೆಗಳು ಮತ್ತೆ ಮನುಷ್ಯ ನ ಅನುಭವ ಮತ್ತು ಜ್ಞಾನಕ್ಕೆ ತಾಂತ್ರಿಕ ತೆ ಒಡ್ಡುತ್ತಿರುವ ಸವಾಲಾಗಿದೆ.ಇಂತಹ ಸಂದರ್ಭದಲ್ಲಿ ತಂತ್ರಜ್ಞಾನ ಯಾವ ಪ್ರಮಾಣದಲ್ಲಿ ಎಲ್ಲಿ ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂದು ಮನುಷ್ಯ ನೆ ನಿರ್ಧರಿಸಬೇಕಾಗಿದೆ ಎಂದು ಅರುಂಧತಿ ಭಟ್ಟಾಚಾರ್ಯ ಕರ್ಣಾಟಕ ಬ್ಯಾಂಕ್ ನ ಸಾಧನೆ ಯ ಬಗ್ಗೆ ಶ್ಲಾಘಿಸಿದರು.

ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮಭಟ್ ಅಧ್ಯಕ್ಷತೆ ವಹಿಸಿ ಗ್ರಾಹಕರಿಗೆ ಶುಭಹಾರೈಸಿದ ರು. ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾ ಬಲೇಶ್ವರ ಎಂ.ಎಸ್ ಸ್ವಾಗತಿಸಿ ಮಾತನಾಡು ತ್ತಾ,ಕರ್ಣಾಟಕ ಬ್ಯಾಂಕ್ ಡಿಸೆಂಬರ್  2019ರ ಅಂತ್ಯದಲ್ಲಿ 404.47ಕೋಟಿ ರೂ ನಿವ್ವಳ ಲಾಭ ಗಳಿಸಿದೆ.1,26,267ಕೋಟಿ ರೂ ಆರ್ಥಿಕ ವ್ಯವಹಾರವನ್ನು ಹೊಂದಿದೆ.71,356 ಕೋಟಿ ರೂ ಬಂಡವಾಳವನ್ನು ಹೊಂದಿದ್ದು ,54,911 ಕೋಟಿ ರೂ ಸಾಲ ನೀಡಿದ್ದು,2018-19ರಲ್ಲಿ 35ಶೇಕಡಾ ಡಿವಿಡೆಂಡ್ ನೀಡಿರುವ ಬ್ಯಾಂಕ್ 1.13ಕೋಟಿ ಗ್ರಾಹಕರನ್ನು ಹೊಂದಿರುವ ಬಲಿಷ್ಠ ಬ್ಯಾಂಕ್ ಆಗಿದ್ದು 826 ಯೋಜನೆಗಳ ಮೂಲಕ 31.47ಕೋಟಿ ರೂಪಾಯಿ ಗಳನ್ನು ಸಿಎಸ್ಆರ್ ನಿಧಿಯ ವಿತರಣೆಯ ಮೂಲಕ ಸಮಾಜಕ್ಕೆ ನೀಡಿದೆ .ಶೀಘ್ರದಲ್ಲಿ ಬ್ಯಾಂಕ್ ತಲಾ 10ಶೇರು ಹೊಂದಿರುವ ಶೇರುದಾರರಿಗೆ ಬೋನಸ್ ರೂಪದಲ್ಲಿ ಹೆಚ್ಚುವರಿಯಾಗಿ ಒಂದು ಶೇರು ನೀಡಲಿದೆ ಎಂದು ಮಹಾಬಲೇಶ್ವರ ತಿಳಿಸಿದ್ದಾರೆ.

ಸಿಎಸ್ ಆರ್ ನಿಧಿ ವಿತರಣೆ:- ಬೆಂಗಳೂರಿನ ಪೂರ್ಣ ಪ್ರಜ್ಞಾ ಸಂಶೋಧನಾ ಸಂಸ್ಥೆ ಯ ನಿರ್ದೇಶಕ ಡಾ.ಬಿ.ಆನಂದ ಹಲಗೇರಿಯವರಿಗೆ  ಸೋಲಾರ್ ಅಳವಡಿಕೆಗೆ 25 ಲಕ್ಷ, ಚಿಕ್ಕಮಗಳೂರಿನ ಪ್ರಬೋಧಿನಿ ಟ್ರಸ್ಟ್ ನ ಆಡಳಿತ ಟ್ರಸ್ಟಿ ಎಚ್.ಬಿ. ರಾಜಗೋಪಾಲರಿಗೆ ಆಚಾರ್ಯ ಭವನ ನಿರ್ಮಾಣಕ್ಕೆ 23ಲಕ್ಷ,ಬಂಟ್ವಾಳದ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಚಂದ್ರಶೇಖರ ಭಟ್ ರವರಿಗೆ ಶಾಲಾ ಕಟ್ಟಡ ನಿರ್ಮಾಣ ಕ್ಕೆ 10ಲಕ್ಷ ರೂ  ಮೊದಲಾದ ವರಿಗೆ ಬ್ಯಾಂಕ್ ನ ಸಿಎಸ್ ಆರ್ ಯೋಜನೆ ಯ ಪ್ರಕಾರ ಸಹಾಯಧನ ವಿತರಿಸಲಾಯಿತು. ಗೋಕುಲದಾಸ ಪೈ ವಂದಿಸಿದರು.ಜೆನ್ನಿಫರ್‌ ಮೊರಸ್ ಕಾರ್ಯಕ್ರಮ ನಿರೂಪಿಸಿದರು.

ಸಂಗೀತ ಕಾರ್ಯಕ್ರಮ:- ಉಪನ್ಯಾಸ ದ ಬಳಿಕ ಹಿಂದೂಸ್ಥಾನಿ-ಕರ್ಣಾಟಕ ಶಾಸ್ತ್ರೀಯ ಸಂಗೀತ ಜುಗಲ್ ಬಂದಿ ಕಛೇರಿ ಏರ್ಪಡಿಸಲಾಗಿತ್ತು. ಪದ್ಮಭೂಷಣ ಪಂಡಿತ್ ವಿಶ್ವ ಮೋಹನ ಭಟ್ ರವರ -ಮೋಹನ ವೀಣಾ, ವಿದ್ವಾನ್ ಡಾ.ಮೈಸೂರು ಮಂಜುನಾಥ ಭಟ್ - ವಯೋಲಿನ್, ಪದ್ಮಶ್ರೀ ಪಂಡಿತ್ ವಿಜಯ ಘಾಟೆ-ತಬಲಾ, ವಿದ್ವಾನ್ ಪತ್ರಿ ಸತೀಶ್ ಕುಮಾರ್-ಮ್ರದಂಗ ವಾದನದೊಂದಿಗೆ ಕಲಾವಿದರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News