ಪ್ರವಾದಿ ನಿಂದನೆ: ಎಸ್ಕೆಎಸ್ಸೆಸ್ಸೆಫ್ ತುಂಬೆ ಘಟಕ ಖಂಡನೆ

Update: 2020-02-18 18:02 GMT

ಬಂಟ್ವಾಳ, ಫೆ.18: ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವ ಪ್ರವಾದಿಯನ್ನು ವ್ಯಕ್ತಿಯೊಬ್ಬ ತೀರಾ ಕೆಟ್ಟ ಪದಗಳಿಂದ ನಿಂದಿಸಿರುವ ಘಟನೆಯನ್ನು ಎಸ್ಕೆಎಸ್ಸೆಸ್ಸೆಫ್ ತುಂಬೆ ಘಟಕ ತೀವ್ರವಾಗಿ ಖಂಡಿಸಿದೆ.

ವಿಶ್ವ ಪ್ರವಾದಿ ಮುಹಮ್ಮದ್ ಮುಹಮ್ಮದ್ ಮುಸ್ತಫಾ (ಸ.ಅ) ಅವರನ್ನು ವಿಶ್ವ ಮುಸ್ಲಿಮರು ಮಾತ್ರವಲ್ಲದೆ ಇತರ ಧರ್ಮಗಳ ಜನರು ಕೂಡಾ ತಮ್ಮ ಜೀವಕ್ಕಿಂತ ಹೆಚ್ಚಾಗಿ ಗೌರವಿಸುತ್ತಾರೆ. ಅಂತಹ ಪ್ರವಾದಿಯನ್ನು ಕೆಟ್ಟದಾಗಿ ನಿಂದಿಸಿರುವುದು ತೀವ್ರ ಖಂಡನೀಯವಾಗಿದೆ. ಇದು ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿ ಮಾಡುವ ಪ್ರಯತ್ನವಾಗಿದೆ. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಪೊಲೀಸ್ ಇಲಾಖೆ ಪ್ರವಾದಿಯನ್ನು ನಿಂದಿಸಿ ವ್ಯಕ್ತಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಎಸ್ಕೆಎಸ್ಸೆಸ್ಸೆಫ್ ತುಂಬೆ ಘಟಕ ಶಾಖೆ ಪ್ರಕಟನೆಯಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News