ಫೆ. 21ರಿಂದ ಕಣ್ಣಂಗಾರ್ ಉರೂಸ್: ಧಾರ್ಮಿಕ ಮತಪ್ರಭಾಷಣ, ಹಾಫಿಲ್ ಬಿರುದು ಪ್ರದಾನ

Update: 2020-02-19 11:08 GMT

ಪಡುಬಿದ್ರಿ: ಕಣ್ಣಂಗಾರ್ ಜುಮಾ ಮಸೀದಿಯ ಮುಂಭಾಗದಲ್ಲಿರುವ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ (ಖ.ಸಿ.ಅ) ದರ್ಗಾ ಶರೀಫ್ ಕಣ್ಣಂಗಾರ್ ಉರೂಸ್ ಸಮಾರಂಭವು  ಫೆ. 21ರಿಂದ 29ರತನಕ ನಡೆಯಲಿದೆ.

ಬುಧವಾರ ಕಾಪು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿಯ ಅಧ್ಯಕ್ಷ ಯು.ಕೆ. ಅಬ್ದುಲ್ ಹಮೀದ್ ಮಿಲಾಫ್ ಈ ಬಗ್ಗೆ ತಿಳಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಕಣ್ಣಂಗಾರ್ ಜುಮಾ ಮಸೀದಿ ಮುಂಭಾಗದಲ್ಲಿರುವ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ (ಖ.ಸಿ.ಅ) ಹೆಸರಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುತ್ತಿರುವ ಉರೂಸ್ ಸಮಾರಂಭ ನಡೆಯುತ್ತಿದೆ. ಫೆ. 21ರಂದು ಶುಕ್ರವಾರ ಜುಮಾ ನಮಾಝ್‍ನ ಬಳಿಕ ಸೆಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಧ್ವಜಾರೋಹಣ ನೆರವೇರಿಸಲಿ ದ್ದಾರೆ. ಡಾ. ಮುಹಮ್ಮದ್ ಪಾಝಿಲ್ ರಝ್ವಿ ಭಾಗವಹಿಸಲಿದ್ದಾರೆ. ಅಂದು ಇಶಾ ನಮಾಝಿನ ಬಳಿಕ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ತಾಜುಲ್ ಫುಕಹಾ ಪಿ.ಎಮ್. ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಲಿದ್ದಾರೆ. ಕಿಂಬ್ರ ಮರ್ಕಝುಲ್ ಹುದಾ ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಯು.ಕೆ. ಮುಹಮ್ಮದ್ ಸಅದಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಫೆ. 22ರಂದು ಅಸಯ್ಯದ್ ಅಬ್ದುರ್ರಹ್ಮಾನ್ ತಂಙಳ್ ದಾರಿಮಿ ಆಟೀರಿ ಕಳತ್ತೂರು ಪ್ರಭಾಷಣ ಮಾಡಲಿದ್ದಾರೆ. 23ರಂದು ಅಸಯ್ಯದ್ ಜಅಫರ್ ಅಸ್ಸ್ಖಾಫ್ ತಂಙಳ್ ಕೋಟೇಶ್ವರ ದುವಾ ನೆರವೇರಿಸಲಿದ್ದು, ಮುಹ್ಹದ್ದೀನ್ ಕಾಮಿಲ್ ಸಖಾಫಿ ತೋಕೆ ಪ್ರಭಾಷಣ ಮಾಡಲಿದ್ದಾರೆ. 24ರಂದು ಮುಹಮ್ಮದ್ ಮಸೂದ್ ಸಖಾಫಿ ಗೂಡಲ್ಲೂರು ಪ್ರಭಾಷಣ ಮಾಡಲಿದ್ದು, 25ರಂದು ಜಲಾಲಿಯ್ಯ ರಾತೀಬ್ ನಡೆಯಲಿದೆ. ಅಸಯ್ಯದ್ ಕೆ.ಎಸ್. ಜಅಫರ್ ಸ್ವಾದಿಕ್ ತಂಙಳ್ ಕುಂಬೋಳ್ ನೇತೃತ್ವ ವಹಿಸಲಿದ್ದಾರೆ. 26ರಂದು ಪೇರೋಡ್ ಮುಹಮ್ಮದ್ ಅಝ್‍ಹರಿ ಪ್ರಭಾಷಣ ಮಾಡಲಿದ್ದು, 27ರಂದು ಮುಹಮ್ಮದ್ ಫರೂಕ್ ನಈಮಿ ಕೊಲ್ಲಂ ಪ್ರಭಾಷಣ ಮಾಡಲಿದ್ದಾರೆ. 28ರಂದು ಅಸಯ್ಯದ್ ಅಬ್ದುಲ್ ರಹಿಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ದುವಾ ನೆರವೇರಿಸಲಿದ್ದು, ಮುಹಮ್ಮದ್ ನೌಫಲ್ ಸಖಾಫಿ ಕಳಸ ಪ್ರಭಾಷಣ ಮಾಡಲಿದ್ದಾರೆ.

ಫೆ.29ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಅಸಯ್ಯದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ, ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಡಾ. ಮುಹಮ್ಮದ್ ಫಾಝಿಲ್ ರಝ್ವಿ, ಸಯ್ಯದ್ ತ್ವಾಹಾ ಗಾಣೆಮಾರ್, ಹಾಫಿಳ್ ಮುಹಮ್ಮದ್ ಸ್ವಾದಿಕ್ ಫಾಳಿಲಿ ಗೂಡಲ್ಲೂರು, ಎನ್.ಕೆ. ಎಂ.  ಶಾಫಿ ಸಅದಿ ಬೆಎಂಗಳೂರು ಹಾಗೂ ಸಾಮಾಜಿಕ, ಧಾರ್ಮಿಕ, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ. ಅದೇ ದಿನ ಕಣ್ಣಂಗಾರ್ ಜುಮ್ಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿಫ್ಲುಲ್ ಕುರ್ ಆನ್ ಕಾಲೇಜಿನಲ್ಲಿ ಕುರ್ ಆನ್ ಕಂಠಪಾಠಗೈದ 7ಮಂದಿ ವಿದ್ಯಾರ್ಥಿಗಳಿಗೆ ಹಾಫಿಲ್ ಬಿರುದು ಪ್ರದಾನ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಎಂ.ಎಸ್. ಸಿರಾಜ್, ಟಿ.ಎಮ್. ಬಾವ, ಎಸ್.ಎಚ್. ಹನೀಫ್ ಕಣ್ಣಂಗಾರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News