ಗ್ಲೋಬಲ್ ಚಾರಿಟೇಬಲ್ ಟ್ರಸ್ಟ್ ನಿಂದ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ

Update: 2020-02-19 12:57 GMT

ಮಂಗಳೂರು, ಫೆ.19: ಕೊಣಾಜೆಯ ಗ್ಲೋಬಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.

ವಿಧವೆಯರು ಮತ್ತು ಅನಾಥ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಮಾಸಿಕ ಆರ್ಥಿಕ ಧನಸಹಾಯ ಮತ್ತು ಅಂಗವಿಕಲರಿಗೆ ವಸತಿ, ಪಡಿತರ ಮತ್ತು ಬಟ್ಟೆಬರೆಗಳನ್ನು ನೀಡುವ ಉದ್ದೇಶದಿಂದ 2016ರಲ್ಲಿ ಈ ಟ್ರಸ್ಟ್ ಸ್ಥಾಪನೆಗೊಂಡಿದೆ.

ಟ್ರಸ್ಟ್‌ನ ಮಹಾಸಭೆಯ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ 10 ಅರ್ಹ ಫಲಾನುಭವಿಗಳಿಗೆ ಮಾಸಿಕ ತಲಾ 2,000 ರೂ.ನಂತೆ ಆರು ತಿಂಗಳ 1,20,000 ರೂ. ಮೊತ್ತದ ಚೆಕ್ ಹಾಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ರಿಫಾಯೀ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ನಡುಪದವು ಜುಮಾ ಮಸೀದಿಯ ಅಧ್ಯಕ್ಷ ನಾಸಿರ್ ಕೆ.ಕೆ., ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೆಎಂ ಕೋಡಿಜಾಲ್ ಮತ್ತು ಗ್ಲೋಬಲ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಉಪಸ್ಥಿತರಿದ್ದರು.

ಟ್ರಸ್ಟ್  ಕೋಶಾಧಿಕಾರಿ ಬಿಲಾಲ್ ಬಿ.ಎಸ್. ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಸಲ್ಮಾನ್ ವರದಿ ವಾಚಿಸಿದರು. ಸದಸ್ಯರಾದ ಶಮೀಮ್ ಕಿರಾಅತ್ ಪಠಿಸಿದರು. ರಿಯಾಝ್ ಸ್ವಾಗತಿಸಿದರು. ಶಮೀರ್ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು. ಶರೀಫ್ ಕೋಡಿಜಾಲ್ ವಂದಿಸಿದರು.

ಟ್ರಸ್ಟ್‌ನ 2020-21ನೆ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ರಿಝ್ವಾನ್, ಅಧ್ಯಕ್ಷರಾಗಿ ಅನ್ವರ್ ಸಾದಾತ್, ಉಪಾಧ್ಯಕ್ಷರಾಗಿ ಶಮೀರ್, ಕಾರ್ಯದರ್ಶಿಯಾಗಿ ಶರೀಫ್, ಜೊತೆ ಕಾರ್ಯದರ್ಶಿಯಾಗಿ ಇರ್ಶಾದ್, ಕೋಶಾಧಿಕಾರಿಯಾಗಿ ಬಿಲಾಲ್ ಬಿಎಸ್, ಸಹಾಯಕ ಕೋಶಾಧಿಕಾರಿಯಾಗಿ ರಿಯಾಝ್ ಅಬ್ದುಲ್ಲಾ ಮತ್ತು ನೌಶಾದ್ ಕೆ.ಎಂ., ಸಂಘಟನಾ ಕಾರ್ಯದರ್ಶಿಯಾಗಿ ಅಬ್ಬಾಸ್‌ ಡಿ.ಎಚ್. ಮತ್ತು ಶಾಝೀರ್, ಸಲಹೆಗಾರರಾಗಿ ಅಬ್ದುರ್ರಹ್ಮಾನ್ ಕೆಎಂ ಮತ್ತು ಮುಹಮ್ಮದ್ ಅಶ್ರಫ್ ಆಯ್ಕೆಯಾಗಿದ್ದಾರೆ.

ಈ ಸಂದರ್ಭ  ಟ್ರಸ್ಟ್ ನ ಹೊಸ ವೆಬ್ ಸೈಟ್ ಅನ್ನು ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೆಎಂ ಕೋಡಿಜಾಲ್ ಅವರು ಅನಾವರಣಗೊಳಿಸಿದರು.

ವೆಬ್ ಸೈಟ್ ಲಿಂಕ್: https://5e48e1157aa8c.site123.me

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News