ಬ್ರಿಟನ್‌ನಲ್ಲಿ ಅಂಕ ಆಧಾರಿತ ನೂತನ ವೀಸಾ ವ್ಯವಸ್ಥೆ

Update: 2020-02-19 14:51 GMT

ಲಂಡನ್, ಫೆ. 19: ಬ್ರಿಟನ್‌ನ ಅಂಕಗಳ ಆಧಾರಿತ ನೂತನ ವೀಸಾ ವ್ಯವಸ್ಥೆಯನ್ನು ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಮಂಗಳವಾರ ಘೋಷಿಸಿದ್ದಾರೆ. ನೂತನ ವ್ಯವಸ್ಥೆಯು ಜಗತ್ತಿನ ‘ಅತ್ಯಂತ ಪರಿಣತರು ಮತ್ತು ಶ್ರೇಷ್ಠ’ರನ್ನು ಸೆಳೆದುಕೊಳ್ಳುವ ಹಾಗೂ ದೇಶಕ್ಕೆ ಬರುವ ಕಡಿಮೆ ಕೌಶಲದ ಅಗ್ಗದ ಕೆಲಸಗಾರರ ಸಂಖ್ಯೆಯನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ.

ನೂತನ ವ್ಯವಸ್ಥೆಯು, ಐರೋಪ್ಯ ಒಕ್ಕೂಟದಿಂದ ಕಳೆದ ತಿಂಗಳು ಹೊರಬಂದ ಬಳಿಕ, ಬ್ರಿಟನ್‌ನ ಪರಿವರ್ತನಾ ಅವಧಿಯ ಮುಕ್ತಾಯಗೊಂಡ ನಂತರ 2021 ಜನವರಿ 1ರಿಂದ ಜಾರಿಗೆ ಬರಲಿದೆ.

ಬ್ರೆಕ್ಸಿಟ್ ನಂತರದ ಈ ವ್ಯವಸ್ಥೆಯು ಐರೋಪ್ಯ ಒಕ್ಕೂಟ ಮತ್ತು ಐರೋಪ್ಯ ಒಕ್ಕೂಟೇತರ ದೇಶಗಳಿಗೆ ಸಮಾನವಾಗಿ ಅನ್ವಯಿಸುತ್ತದೆ. ನೂತನ ವೀಸಾ ವ್ಯವಸ್ಥೆಯಲ್ಲಿ ನಿರ್ದಿಷ್ಟ ಕೌಶಲಗಳು, ಅರ್ಹತೆಗಳು, ವೇತನಗಳು ಮತ್ತು ಕೆಲಸಗಳಿಗೆ ಅಂಕಗಳನ್ನು ನೀಡಲಾಗುತ್ತದೆ ಹಾಗೂ ಸಾಕಷ್ಟು ಅಂಕಗಳನ್ನು ಪಡೆದವರಿಗೆ ಮಾತ್ರ ವೀಸಾಗಳನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News