ಗೃಹರಕ್ಷಕ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ
Update: 2020-02-19 20:45 IST
ಉಡುಪಿ, ಫೆ.19: ಜಿಲ್ಲಾ ಗೃಹರಕ್ಷಕ ದಳದ ಕಾಪು ಘಟಕದ ಘಟಕಾಧಿಕಾರಿ ಲಕ್ಷ್ಮೀನಾರಾಯಣ್ ರಾವ್ ಅವರಿಗೆ 2018 ನೇ ಸಾಲಿನ ಮುಖ್ಯಮಂತ್ರಿಳ ಚಿನ್ನದ ಪದಕ ಘೋಷಣೆಯಾಗಿದೆ.
ಇವರು ಸುಮಾರು 12 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಸಮಾದೇಷ್ಟ ಡಾ. ಪ್ರಶಾಂತ್ ಶೆಟ್ಟಿ ಲಕ್ಷ್ಮಿನಾರಾಯಣ ರಾವ್ ಇವರನ್ನು ಅಭಿನಂದಿಸಿದ್ದಾರೆ ಎಂದು ಜಿಲ್ಲಾ ಗೃಹರಕ್ಷಕದಳದ ಪ್ರಕಟಣೆ ತಿಳಿಸಿದೆ.