ಸಾಲಿಗ್ರಾಮ: ವ್ಯಾಪಾರೋದ್ದಿಮೆ ಪರವಾನಿಗೆ ನವೀಕರಣಕ್ಕೆ ಸೂಚನೆ

Update: 2020-02-19 15:17 GMT

ಉಡುಪಿ, ಫೆ.19: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಉದ್ದಿಮೆದಾರರು, 2019-20ನೇ ಸಾಲಿನ ಹಾಗೂ ಈ ಹಿಂದಿನ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಬಾಕಿ ಇರುವವರು ನಿಗದಿತ ದಾಖಲೆ ಗಳೊಂದಿಗೆ ಒಂದು ವಾರದೊಳಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ದಂಡನೆಯೊಂದಿಗೆ ಉದ್ದಿಮೆ ಪರವಾನಿಗೆ ನವೀಕರಿಸಿಕೊಳ್ಳಬಹುದು. ಇದಕ್ಕೆ ತಪ್ಪಿದ್ದಲ್ಲಿ ಉದ್ಯಮ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದು ಸಾಲಿಗ್ರಾಮ ಪಟ್ಟಮ ಪಂಚಾಯತ್‌ನ ಪ್ರಕಟಣೆ ತಿಳಿಸಿದೆ.

ಉದ್ಯಮ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಉದ್ಯಮ ನಡೆಸುತಿದ್ದಲ್ಲಿ ಪಟ್ಟಣ ಪಂಚಾಯತ್ ಕಚೇರಿಗೆ ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ, ಇದಕ್ಕೆ ತಪ್ಪಿದ್ದಲ್ಲಿ ಕರ್ನಾಟಕ ಪುರಸಭೆ ಕಾಯಿದೆ ಪ್ರಕಾರ ದಂಡನೆ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುುದು ಎಂದು ಪ್ರಕಟಣೆ ವಿವರಿಸಿದೆ.

ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಶುಚಿತ್ವವನ್ನು ಕಾಪಾಡುವಂತೆ ಹಾಗೂ ಮನೆಯಲ್ಲಿ ಅಥವಾ ಯಾವುದೇ ರೀತಿಯ ಉದ್ಯಮದಲ್ಲಿ ಉತ್ಪತ್ತಿಯಾಗುವ ಹಸಿತ್ಯಾಜ್ಯ ಮತ್ತು ಒಣತ್ಯಾಜ್ಯವಾಗಿ ವಿಂಗಡಿಸಿ, ಹಸಿ ತ್ಯಾಜ್ಯವನ್ನು ತಮ್ಮ ತಮ್ಮ ಹಂತದಲ್ಲಿಯೇ ಪೈಪ್ ಕಾಂಪೋಸ್ಟ್, ಪಿಟ್ ಕಾಂಪೋಸ್ಟ್ ಮೂಲಕ ವಿಲೇಮಾಡುವಂತೆ, ಒಣತ್ಯಾಜ್ಯವನ್ನು ಮಾತ್ರ ಪಟ್ಟಣಪಂಚಾಯತ್ ವಾಹನಕ್ಕೆ ನೀಡುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News