ಫೆ.20ರಿಂದ ಎಂಐಸಿಯ ‘ಆರ್ಟಿಕಲ್-19’

Update: 2020-02-19 16:12 GMT

ಮಣಿಪಾಲ, ಫೆ.19: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ)ಯ ವಾರ್ಷಿಕ ಮಾಧ್ಯಮ ಮೇಳ ‘ಆರ್ಟಿಕಲ್-19’ ಫೆ.20ರಿಂದ 22ರವರೆಗೆ ನಡೆಯಲಿದೆ.

ಈ ಬಾರಿಯ ಆರ್ಟಿಕಲ್-19ರಲ್ಲಿ ಖ್ಯಾತ ಪತ್ರಕರ್ತರಾದ ವಿನೋದ ಕೆ. ಜೋಸ್, ಆನಂದ ರಂಗನಾಥನ್, ಪ್ರಹ್ವಾದ್ ಕಕ್ಕರ್, ರಾಹುಲ್ ಬೋಸ್ ಮುಂತಾದವರು ಭಾಗವಹಿಸಲಿದ್ದಾರೆ. ಇವರೊಂದಿಗೆ ವಿವಿಧ ರಂಗಗಳ ತಜ್ಞರಾದ ಹರ್ಷವೀರ್ ಜೈನ್, ದಿವಾಂಶು ಕುಮಾರ್, ಸತ್ಯಾಂಶು ಸಿಂಗ್, ಕಾರ್ತಿಕ್ ಶ್ರೀನಿವಾಸನ್, ದಿಶಾ ಓಬಿರಾಯ್, ಶ್ವೇತಾ ಕೊಠಾರಿ ಅವರು ವಿವಿಧ ವಿಷಯಗಳ ಮೇಲೆ ಉಪನ್ಯಾಸ ನೀಡಲಿದ್ದಾರೆ ಎಂದು ಎಂಐಸಿಯ ನಿರ್ದೇಶಕಿ ಡಾ.ಪದ್ಮಾರಾಣಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News