ಭಟ್ಕಳ: ಅರಣ್ಯ ಅತಿಕ್ರಮಣದಾರರ ವೈಯಕ್ತಿಕ ತಕರಾರು ಅರ್ಜಿ ಸಲ್ಲಿಕೆ ಅಭಿಯಾನ

Update: 2020-02-19 17:08 GMT

ಭಟ್ಕಳ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ಕಾನೂನಿನಲ್ಲಿ ಉಲ್ಲೇಖಿಸಿದಂತೆ ಕ್ಲೇಮಿನ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಗಳನ್ನು ಒತ್ತಾಯಿಸದೇ ಮಂಜೂರಿ ಪ್ರಕ್ರಿಯೇ ಶೀಘ್ರದಲ್ಲಿ ಜರುಗಿಸುವ ಕುರಿತು ಜಿಲ್ಲಧಿಕಾರಿಗಳಿಗೆ ಅರಣ್ಯ ಅತಿಕ್ರಮಣದಾರರು ವೈಯಕ್ತಿಕವಾಗಿ ತಕರಾರು ಅರ್ಜಿ ಸಲ್ಲಿಸುವ ಅಭಿಯಾನ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂಧ್ರ ನಾಯ್ಕ ನೇತ್ರತ್ವದಲ್ಲಿ ಬುಧವಾರ ನಡೆಯಿತು.

ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಇಂದು ಉ.ಕ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅತಿಕ್ರಮಣದಾರರ ಅರ್ಜಿಯನ್ನು 3 ತಲೆಮಾರಿನ ಸಾಗುವಳಿ ದಾಖಲೆಯನ್ನು ಆಧರಿಸಿ ಒತ್ತಾಯಿಸುತ್ತಿದ್ದು ಈ ದಿಶೆಯಲ್ಲಿ 85,757 ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ 74,220 ಅರ್ಜಿಗಳು ತಿರಸ್ಕಾರವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ತಿರಸ್ಕರಿಸಿದ ಆದೇಶವು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿವಿಧಾನವನ್ನು ಅನುಸರಿಸದೇ ಅರ್ಜಿಗಳನ್ನು ತಿರಸ್ಕರಿಸುವುದಕ್ಕೆ ಆಕ್ಷೇಪಿಸಿ ಸದ್ರಿ ಅಭಿಯಾನವನ್ನು ಜರುಗಿಸಿದ್ದು  ಕಾರ್ಯಕ್ರಮದ ವಿಶೇಷವಾಗಿತ್ತು.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ನಿರ್ದಿಷ್ಠ ಪಡಿಸಿದ ದಾಖಲತಿ ಸಾಕ್ಷ್ಯಗಳನ್ನು ಆಧರಿಸಲು ಒತ್ತಾಯಿಸತಕ್ಕದಲ್ಲ ಅಲ್ಲದೇ ಕೇಂದ್ರ ಬುಡಕಟ್ಟು ಮಂತ್ರಾಲಯವು 25 ವರ್ಷದ ಸ್ವಾಧಿನಕ್ಕೆ ಅತಿಕ್ರಮಣದಾರರ ವೈಯಕ್ತಿಕ ದಾಖಲೆ ಪರಿಗಣಿಸದೇ ಅರಣ್ಯ ಅತಿಕ್ರಮಣದಾರರು ಸಾಗುವಳಿಯ ಪ್ರದೇಶ, ಜನವಸತಿ ಪ್ರದೇಶ ಇರುವ ಆಧಾರದ ಮೇಲೆ ಮಂಜೂರಿ ಪ್ರಕ್ರಿಯೇ ಜರುಗಿಸಬೇಕೆಂಬ ಆಕ್ಷೇಪಣೆ ಜಿಲ್ಲಾಧಿಕಾರಿಗಳಿಗೆ ಇಂದು ಸಲ್ಲಿಸಿದ ತಕರಾರು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

ತಕರಾರು ಅರ್ಜಿ ಸಲ್ಲಿಸುವ ಅಭಿಯಾನದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪಾಂಡುರಂಗ ನಾಯ್ಕ, ಸೈಯ್ಯದ್ ಅಲಿ, ಮಾದೇವ ನಾಯ್ಕ, ಅಬ್ದುಲ್ ಕರಿಮ್, ದತ್ತ ನಾಯ್ಕ, ನಾರಾಯಣ ಮರಾಠಿ, ಇರ್ಷಾದ್ ಮುಂತಾದವರು ನೇತ್ರತ್ವ ವಹಿಸಿದ್ದರು.

ಸ್ಥಳೀಯ ತಹಶಿಲ್ದಾರ ನೇತೃತ್ವದಲ್ಲಿ 10 ವಿಶೇಷ  ಕೌಂಟರಗಳನ್ನು ಮಾಡಿ ತಾಲೂಕಾ ದಂಡಾಧಿಕಾರಿ ಕಛೇರಿಯ ಸಿಬ್ಬಂಧಿಗಳು ಅರ್ಜಿ ಸ್ವಿಕರಿಸಲು ವ್ಯವಸ್ಥೆಯನ್ನು ಜರುಗಿಸಲಾಗಿತ್ತು. ಸಿ.ಪಿ.ಐ , ಪಿ.ಎಸ.ಐ ಗಳು ಕಾನೂನು ಪಾಲನೆ ಜರುಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News