ಬೆಳ್ತಂಗಡಿ : ಫೆ.24ರಿಂದ ಪರಪ್ಪು ಉರೂಸ್ ಕಾರ್ಯಕ್ರಮ

Update: 2020-02-19 17:15 GMT

ಬೆಳ್ತಂಗಡಿ : ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಪರಪ್ಪು ವಲಿಯಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್‍  ಉರೂಸ್ ಕಾರ್ಯಕ್ರಮವು ಫಝಲ್ ಕೋಯ್ಯಮ್ಮ ತಂಙಳ್ ಕೂರತ್ ಅವರ ನೇತೃತ್ವದಲ್ಲಿ ಫೆ.24ರಿಂದ ಫೆ.29ರವರೆಗೆ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬ್ದುಲ್ ಕರೀಮ್ ಗೇರುಕಟ್ಟೆ ಹೇಳಿದ್ದಾರೆ.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಮುಖ್ಯ ಪ್ರಭಾಷಣಗೈಯಲಿದ್ದು ಅಸ್ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್  ಮನ್‍ಷರ್ ಭಾಷಣ ಮಾಡಲಿದ್ದಾರೆ. ಕರ್ನಾಟಕ ಸರಕಾರ ನಗರಾಭಿವೃದ್ಧಿ ಇಲಾಖೆಯ  ಉಪಕಾರ್ಯದರ್ಶಿ ಕೆ.ಎ ಹಿದಾಯುತ್ತುಲ್ಲ ಉಪಸ್ಥಿತರಿರಲಿದ್ದಾರೆ.

ಫೆ.24ರಂದು ಸಂಜೆ 5ಗಂಟೆಗೆ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಹಾಜಿ ಅಬೂಬಕ್ಕರ್ ಪೆಳತ್ತಲಿಕೆ ಧ್ವಜಾರೋಹಣಗೈಯಲಿದ್ದಾರೆ. ಉರೂಸ್ ಸಮಿತಿಯ ಅಧ್ಯಕ್ಷ ರವೂಫ್ ಹಾಜೀ ಬಿ.ಕೆ  ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 8ಗಂಟೆಗೆ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮವನ್ನು ಮಸೀದಿಯ ಗೌರವಾಧ್ಯಕ್ಷ ಅಸ್ಸಯ್ಯದ್ ಅಬೂಬಕ್ಕರ್ ಸಿದ್ದಿಕ್ ತಂಙಳ್ ಅಲ್ ಹಾದಿ ಮದನಿ ಉದ್ಘಾಟಿಸಲಿದ್ದಾರೆ. ರಫಿಕ್ ಸಹದಿ ದೇಲಂಪಾಡಿ ಅನುಸ್ಮರಣಾ ಭಾಷಣ ಮಾಡಲಿದ್ದಾರೆ.  ಫೆ.25ರಂದು ಅಬ್ದುಲ್ ರಶೀದ್ ಸಅದಿ ಬೋಳಿಯಾರ್, ಫೆ.26ರಂದು ಅಲ್ ಹಾಜ್ ಕೆ.ಪಿ ಹುಸೈನ್ ಸಅದಿ, ಫೆ.27ರಂದು ರಾಫಿ ಅಹ್ಸನಿ ಕಾಂತಪುರಂ, ಫೆ.28ರಂದು ಹಂಝ ಮಿಸ್ಬಾಹಿ ಓಟೆಪದವು ಪ್ರಭಾಷಣಗೈಯಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತು ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ  ಆ್ಯಂಬುಲೆನ್ಸ್ ಚಾಲಕ ಹನೀಫ್ ಬಳಂಜ ಅವರನ್ನು ಗೌರವಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಬಿ.ಕೆ. ರವೂಫ್, ಮಸೀದಿ ಅಧ್ಯಕ್ಷ ಅಬೂಬಕರ್ ಹಾಜಿ ಪೆಳತ್ತಲಿಕೆ, ಸೈಫುಲ್ಲ ಎಚ್.ಎಸ್, ಆಸಿಫ್ ಎಸ್.ಯು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News