ಫೆ.21ರಿಂದ ಶಂಸುಲ್ ಉಲಮಾ ಅರಬಿಕ್ ಕಾಲೇಜು ದಶಮಾನೋತ್ಸವ, ಸನದುದಾನ ಸಮ್ಮೇಳನ

Update: 2020-02-19 17:19 GMT

ಮೂಡುಬಿದಿರೆ : ಜಾಮಿಅಃ ನೂರಿಯ್ಯಾ ಅರೆಬಿಯ್ಯಾ ಪಟ್ಟಿಕ್ಕಾಡ್ ಅಧೀನ ಸಂಸ್ಥೆಯಾದ ತೋಡಾರಿನ ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ದಶವಾರ್ಷಿಕೋತ್ಸವ ಹಾಗೂ ಪ್ರಥಮ ಸನದುದಾನ ಸಮ್ಮೇಳನ, ಮಜ್ಲಿಸುಮನ್ನೂರ್, ದ್ಸಿಕ್ರ್ ಮಜ್ಲಿಸ್ ಮತ ಪ್ರಭಾಷಣ ಮತ್ತು ಸನದು ದಾನ ಹಾಗೂ ಸಮಾರೋಪ ಸಮಾರಂಭ ಫೆ.21ರಿಂದ 23ವರೆಗೆ ನಡೆಯಲಿದೆ ಎಂದು ಎಸ್.ಯು.ಎ.ಸಿ ಮೆನೇಜರ್ ಇಸಾಕ್ ಹಾಜಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.21ರಂದು ಮಧ್ಯಾಹ್ನ ತೋಡಾರು ಬದ್ರಿಯಾ ಸುನ್ನೀ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಸ್ಸಲಾಂ ಬೂಟ್ ಬಝಾರ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ ವಾರ್ಷಿಕೋತ್ಸವ ಸಮಾರಂಭವನ್ನು ಬದ್ರಿಯಾ ಸುನ್ನೀ ಜುಮಾ ಮಸೀದಿ ತೋಡಾರಿನ ಖಾಸಿಂ ದಾರಿಮಿ ಉದ್ಘಾಟಿಸಲಿದ್ದಾರೆ. ಶಂಸುಲ್ ಉಲಮಾ ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಬಿ.ಎ ಮೊಯ್ದಿನ್ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ವಾಗ್ಮಿ ಸ್ವಾಲಿಹ್ ಬತ್ತೇರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದರು.

ಶಂಸುಲ್ ಉಲಮಾ ಪ್ರಶಸ್ತಿ

ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದ ಸಾಧಕ ಸಿದ್ಧಾಪುರದ ಉಸ್ಮಾನ್ ಹಾಜಿ ಅವರಿಗೆ ಶಂಸುಲ್ ಉಲಮಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮಹಾಸಮ್ಮೇಳನದ ಮೊದಲು ಸಂಜೆ 5 ಗಂಟೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶವಿಠಲದಾಸ ಸ್ವಾಮೀಜಿ ಹಾಗೂ ವಿವಿಧ ಧರ್ಮದ ಮುಖಂಡರು, ರಾಜಕೀಯ ಮುಖಂಡರಾದ ಭಾಗವಹಿಸಲಿರುವರು ಎಂದು ಇಸಾಕ್ ಹಾಜಿ ತಿಳಿಸಿದರು.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಿ.ಎ ಉಸ್ಮಾನ್, ಉಪಾಧ್ಯಕ್ಷ ಎಂ.ಜಿ ಮಹಮ್ಮದ್ ಹಾಜಿ, ಕೋಶಾಧಿಕಾರಿ ಮಯ್ಯದ್ದಿ ಪ್ರೇಮ್ ಸಾಗರ್, ಎಸ್.ಯು.ಎ.ಸಿ ಕೋಶಾಧಿಕಾರಿ ಅಶ್ರಫ್ ಗುತ್ತು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News