ಸಜಿಪ: ಮಾ. 5ರಿಂದ ಜಲಾಲಿಯಾ ವಾರ್ಷಿಕ, ಬುರ್ದಾ ಮಜ್ಲೀಸ್

Update: 2020-02-21 14:03 GMT

ಬಂಟ್ವಾಳ, ಫೆ.19: ಸಜಿಪ ಚಟ್ಟೆಕಲ್ ಜಲಾಲಿಯಾ ಜುಮಾ ಮಸೀದಿಯ ವಠಾರದಲ್ಲಿ ಮಾ.5ರಿಂದ ಮೂರು ದಿನಗಳ ಕಾಲ ನಡೆಯಲಿರುವ 8  ನೇ ವರ್ಷದ ಜಲಾಲಿಯಾ ವಾರ್ಷಿಕ ಹಾಗೂ ಬುರ್ದಾ ಮಜ್ಲೀಸ್ ಧಾರ್ಮಿಕ ಕಾರ್ಯಕ್ರಮದ ಪೂರ್ವಭಾವಿ ಸಭೆ ಸೈಯದ್ ಮುಸ್ತಾಖುರಹ್ಮಾನ್ ತಂಙಲ್‍ರ ನೇತೃತ್ವದಲ್ಲಿ ನಡೆಯಿತು.

ಮಾ.5ರಂದು ಮುಹಮ್ಮದ್ ಮದನಿ ಕೋಯಿಕ್ಕೊಡ್ ನೇತೃತ್ವದಲ್ಲಿ ಕುತುಬಿಯ್ಯತ್ ಜಿಸ್ತಿಯಾ, ಮಾ.6ರಂದು ಸೈಯದ್ ಜಮಲುಲೈಲಿ ತಂಙಳ್ ಕಡಲುಂಡಿ ನೇತೃತ್ವದಲ್ಲಿ ದುಅ, ಉಸ್ತಾದ್ ಅಮೀರ್ ಅಲಿ ಜಫಾನಿ ಮಲಪ್ಪುರಂ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಹಾಗೂ ಮಾ.7ರಂದು ಸೈಯದ್ ಶಹೀರ್ ತಂಙಳ್ ನೇತೃತ್ವದಲ್ಲಿ ಜಲಾಲಿಯ್ಯ ರಾತೀಬ್, ಸಯ್ಯಿದ್ ಮುಸ್ತಾಖು ರಹಮಾನ್ ತಂಙಳ್ ಚಟ್ಟೆಕಲ್ ನೇತೃತ್ವದಲ್ಲಿ ಮಳ್ಹರ್ ಹಾಗೂ ಡಾ. ಫಾರೂಕ್ ನಹೀಮಿ ಕೊಲ್ಲಂ ಅಂದು ಪ್ರಭಾಷಣಗೈಯಲಿದ್ದಾರೆ. 

ಈ ಕಾರ್ಯಕ್ರಮದ ಯಶಸ್ವಿಗೆ ಸ್ವಾಗತ ಸಮಿತಿಗಳನ್ನು ರಚಿಲಾಗಿದ್ದು, ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಕುಕ್ಕಾಜೆ, ಉಪಾಧ್ಯಕ್ಷರಾಗಿ ಅಝೀಝ್ ಕಾಪಿಕಾಡ್, ಕರೀಮ್ ಬೊಳ್ಳಾಯಿ, ಕನ್ವೇನರ್ ಆಗಿ ಟಿ.ಕೆ.ಸಅದಿ, ಉಪ ಕನ್ವೇನರ್ ಆಗಿ ಲ್ಯುಕ್ ಮ್ಯಾನ್ ಕುಕ್ಕಾಜೆ, ಹರೀಸ್ ಚಟ್ಟೆಕಲ್, ಖಚಾಂಚಿಯಾಗಿ ಕರೀಮ್ ಕಾದ್ಕಾರ್, ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಸಿದ್ಧಿಕ್ ಕೊಳಕೆ, ಕನ್ವೇನರ್ ಆಗಿ ಮಲಿಕ್ ಕೊಳಕೆ, ಇತರ ಸದಸ್ಯರಾಗಿ ಫಾರೂಕ್ ಕುಕ್ಕಾಜೆ, ಸಲಾಮ್ ಬೋಳಂತೂರು, ಶರೀಫ್ ಮಂಚಿ, ಹಂಸ ಕಾಪಿಕ್ಕಾಡ್, ಸಫ್ವಾನ್ ಬೊಳ್ಳಾಯಿ, ಇಸಾಕ್ ಬೋಳಿಯರ್, ಲತೀಫ್ ವಲವೂರು, ಹನೀಫ್ ಮಸ್ಲೀಯಾರ್ ಸಂಪಿಲ, ಅಶ್ರಫ್ ಕಲ್ಲಡ್ಕ, ದಾವೂದ್ ಪಾಣೆಮಂಗಳೂರು, ಇಬ್ರಾಹೀಂ ಆಲಡ್ಕ ಗೋಲಿಪಡ್ಪು, ಸದ್ದಾಂ ಕಾರಜೆ, ಅನ್ಸರ್ ಗೂಡಿನಬಳಿ, ಇರ್ಷಾದ್ ಹಾಜಿ ಅಮ್ಮೆಂಬಳ, ಸಿರಾಜ್ ತುಂಬೆ, ಆದಂ ತುಂಬೆ, ನಿಝಾಮ್ ಅವರನ್ನು ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News