ಕೋಟ: ಮನೆ ಬಾಗಿಲಿಗೆ ತೆರಳಿ ಪಿಂಚಣಿ ವಿತರಣೆ

Update: 2020-02-20 15:16 GMT

ಉಡುಪಿ, ಫೆ.20: ಜಿಲ್ಲೆಯಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಪಿಂಚಣಿ ವಿತರಿಸುವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್ ನಿರ್ದೇಶನದಂತೆ ಹಾಗೂ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ಮಾರ್ಗದರ್ಶನದಂತೆ ಗುರುವಾರ ಕೋಟ ನಾಡ ಕಛೇರಿ ಉಪತಹಶೀಲ್ದಾರ್ ವಿಶ್ವನಾಥ ಕಿದಿಯೂರು, ಕೋಟ ಹೋಬಳಿ ಕಂದಾಯ ನಿರೀಕ್ಷಕ ರಾಜು ಹಾಗೂ ಹಿಲಿಯಾಣ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ವಿಜಯಕುಮಾರ್, ಕಕ್ಕುಂಜೆ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ಗ್ರಾಮ ಸಹಾಯಕರಾದ ರತ್ನಾ ಹಾಗೂ ಅಣ್ಣಯ್ಯ ಕುಲಾಲ ಇವರು ಮನೆ ಮನೆಗೆ ತೆರಳಿ ಪಿಂಚಣಿಗೆ ಸಂಬಂಧಿಸಿದ ಅರ್ಜಿಗಳನ್ನು ವಿತರಿಸಿದರು.

ಅರ್ಜಿಗಳನ್ನು ಸ್ಥಳದಲ್ಲೇ ಭರ್ತಿ ಮಾಡಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ತನಿಖಾ ವರದಿಯನ್ನು ಬರೆದು ಕೋಟ ನಾಡ ಕಛೇರಿ ಉಪತಹಶೀಲ್ದಾರರು ಸ್ಥಳದಲ್ಲಿಯೇ ಅರ್ಜಿಗಳನ್ನು ಮಂಜೂರು ಮಾಡಿದರು.

ಮಂಜೂರಾತಿ ಆದೇಶದ ಪ್ರತಿಗಳನ್ನು ಅಂಚೆ ಮೂಲಕ ಸಂಬಂದಪಟ್ಟ ಫಲಾನುಭವಿಗಳಿಗೆ ತಲುಪಿಸಲಾಗುವುದು. ಇಂದು ಒಟ್ಟು ಐವರಿಗೆ ಸಂಧ್ಯಾ ಸುರಕ್ಷಾ ಯೋಜನೆ, ಇಬ್ಬರಿಗೆ ವೃದ್ದಾಪ್ಯ ಯೋಜನೆ ಹಾಗೂ ಒಬ್ಬರಿಗೆ ವಿಧಾನ ವೇತನವನ್ನು ಮಂಜೂರಾತಿ ಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News