ಮಂಗಳೂರು ವಿವಿ ವಾಲಿಬಾಲ್ ಪಂದ್ಯಾಟ: ಕೋಡಿ ಬ್ಯಾರೀಸ್ ಕಾಲೇಜು ತಂಡಕ್ಕೆ ಪ್ರಶಸ್ತಿ

Update: 2020-02-20 16:26 GMT

ಕುಂದಾಪುರ, ಫೆ.20: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಐಕಳದ ಪೊಂಪೆ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನಲ್ಲಿ ನಡೆದ ಉಡುಪಿ ವಲಯದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ ದಲ್ಲಿ ಕೋಡಿ ಬ್ಯಾರೀಸ್ ಪದವಿ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನವನ್ನು ಗೆದ್ದುಕೊಂಡಿದೆ.

ಮಂಗಳೂರಿನ ರಾಮಕೃಷ್ಣ ಕಾಲೇಜಿನಲ್ಲಿ ನಡೆದ ಅಂತರ್ ವಲಯದ ಪಂದ್ಯಾಟದಲ್ಲಿ ಇದೇ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ರೆಹಮಾನ್, ನಿರ್ದೇಶಕ ದೋಮ ಚಂದ್ರಶೇಖರ್, ಪ್ರಾಂಶುಪಾಲ ಡಾ.ಶಮೀರ್, ಸಂಸ್ಥೆಯ ಸಲಹೆಗಾರ ಹಾಜಿ ಅಬುಶೇಖ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಮಾಲತಿ, ತರಬೇತುದಾರರಾದ ಇಲಿಯಾಸ್ ತಂಡವನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News