ಸುಪ್ರೀಂ ಕೋರ್ಟ್ ತೀರ್ಪು ಮಹಿಳೆಯರಿಗೆ ಬಲ ನೀಡಲಿದೆ: ಸೇನಾ ವರಿಷ್ಠ

Update: 2020-02-20 16:33 GMT

ಹೊಸದಿಲ್ಲಿ, ಫೆ. 20: ಸೇನೆ ಲಿಂಗತ್ವದ ಆಧಾರದಲ್ಲಿ ತಾರತಮ್ಯ ಮಾಡದು ಹಾಗೂ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗವನ್ನು ಮಂಜೂರು ಮಾಡಿರುವ ಸುಪ್ರೀಂ ಕೋರ್ಟ್‌ನ ತೀರ್ಪು ಅವರಿಗೆ ಬಲ ತುಂಬಲಿದೆ ಎಂದು ಸೇನೆಯ ಮುಖ್ಯಸ್ಥ ಎಂ.ಎಂ. ನರವಣೆ ಹೇಳಿದ್ದಾರೆ.

 ಭಾರತೀಯ ಸೇನೆ ಧರ್ಮ, ಜಾತಿ ಜನಾಂಗ ಹಾಗೂ ಲಿಂಗತ್ವದ ಆಧಾರದಲ್ಲಿ ತಾರತಮ್ಯ ಮಾಡದು ಎಂದು ಎಂ.ಎಂ. ನರವಣೆ ದಿಲ್ಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಭಾರತದ ಸೇನೆಯ ಬಾಹ್ಯ ನೋಟ ಸಂಪೂರ್ಣವಾಗಿ ಈ ರೀತಿಯಾಗಿಯೇ ಇದೆ. ಆದುದರಿಂದಲೇ 1993ರಿಂದ ಸೇನೆಗೆ ಮಹಿಳೆಯರನ್ನು ನಿಯೋಜಿಸಲು ಆರಂಭಿಸಿರುವುದು ಎಂದು ಅವರು ಹೇಳಿದರು.

ಮಹಿಳೆಯರಿಗೆ ಶಾಶ್ವತ ಆಯೋಗ ರಚಿಸುವ ಸುಪ್ರೀಂ ಕೋರ್ಟ್ ತೀರ್ಪು ಮಹಿಳೆಯರಿಗೆ ಬಲ ನೀಡಲಿದೆ. ದೇಶಕ್ಕೆ ಕೊಡುಗೆ ನೀಡುವ ಎಲ್ಲರಿಗೂ ಸಮಾನ ಅವಕಾಶ ನೀಡಲಾಗುವುದು ಎಂದು ಮಹಿಳಾ ಅಧಿಕಾರಿಗಳು ಸಹಿತ ಭಾರತೀಯ ಸೇನೆಯ ಎಲ್ಲರಿಗೂ ಭರವಸೆ ನೀಡುತ್ತೇನೆ ಎಂದು ಅವರು ಹೇಳಿದರು. ಸುಪ್ರೀಂ ಕೋರ್ಟ್‌ನ ತೀರ್ಪು ಸ್ಪಷ್ಟತೆ ನೀಡಿದೆ. ಸೇನೆಯಲ್ಲಿ ಉತ್ತಮ ಸಾಮರ್ಥ್ಯ ತರಲು ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲು ಸೂಚಿಸಿದೆ. ಸೇನೆಯಲ್ಲಿ ಖಾಯಂ ಆಯೋಗಕ್ಕೆ ಆದ್ಯತೆ ನೀಡುತ್ತೀರಾ ಎಂದು ಪ್ರಶ್ನಿಸಿ ಮಹಿಳಾ ಅಧಿಕಾರಿಗಳಿಗೆ ಪತ್ರ ರವಾನಿಸಲಾಗಿದೆ ಎಂದು ನರವಣೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News