ಅಕ್ರಮ ಜಾನುವಾರು ಸಾಗಾಟ: ಓರ್ವ ಬಂಧನ

Update: 2020-02-20 16:35 GMT

ಕುಂದಾಪುರ, ಫೆ.20: ಮಹೇಂದ್ರ ಜಿಪ್ ವಾಹನದಲ್ಲಿ ಅಕ್ರಮವಾಗಿ ಜಾನು ವಾರು ಸಾಗಾಟ ಮಾಡುತ್ತಿದ್ದ ಓರ್ವನನ್ನು ಕುಂದಾಪುರ ಪೊಲೀಸರು ಫೆ.19 ರಂದು ರಾತ್ರಿ ವೇಳೆ ಕೋಟೇಶ್ವರ ಗ್ರಾಮದ ಮೇಪು ಎಂಬಲ್ಲಿ ಬಂಧಿಸಿದ್ದಾರೆ.

ಕುಂದಾಪುರ ಕೋಡಿಯ ಮಹಮ್ಮದ್ ರಫೀಕ್(40) ಬಂಧಿತ ಆರೋಪಿ. ಬಂಧಿತನಿಂದ 8000ರೂ. ಮೌಲ್ಯದ 1 ಜಾನುವಾರು ಹಾಗೂ 1,00,000 ರೂ. ಮೌಲ್ಯದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News