ಸಾಲೆತ್ತೂರು: ಫೆ. 21ರಿಂದ ಅಸ್ಸಯ್ಯಿದ್ ವಲಿಯುಲ್ಲಾಹಿ ಮಖಾಂ ಉರೂಸ್

Update: 2020-02-20 16:52 GMT

ವಿಟ್ಲ, ಫೆ.20: ಸಾಲೆತ್ತೂರು ಅಸ್ಸಯ್ಯಿದ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಮಖಾಂ ಉರೂಸ್ ಹಾಗೂ 9 ದಿನಗಳ ಧಾರ್ಮಿಕ ಮತ ಪ್ರಭಾಷಣ ಖಾಝಿ ಕೂರತ್ ತಂಙಳ್ ಮತ್ತು ಕಟ್ಟತ್ತಿಲ ಮುದರ್ರಿಸ್ ಇಬ್ರಾಹಿಂ ಫೈಝಿ ಪುಳಿಕ್ಕೂರು ಉಸ್ತಾದ್ ಅವರ ನೇತೃತ್ವದಲ್ಲಿ  ಫೆ. 21ರಿಂದ ಮಾರ್ಚ್ 1 ವರೆಗೆ ನಡೆಯಲಿದ್ದು, ಮಾ. 1ರಂದು ಅನ್ನದಾನ ಹಾಗೂ ಹಗಲು ಉರೂಸ್ ನಡೆಯಲಿದೆ ಎಂದು ಕಟ್ಟತ್ತಿಲ ಜುಮಾ ಮಸೀದಿ ಕಾರ್ಯದರ್ಶಿ ಕೆ.ಎಂ ಮುಹಿಯ್ಯುದ್ದೀನ್ ಮದನಿ ತಿಳಿಸಿದರು. 

ಅವರು ಬುಧವಾರ ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಫೆ.21ರಂದು ಮಧ್ಯಾಹ್ನ ಜಿಸಿಸಿ ವತಿಯಿಂದ ನಿರ್ಮಿಸಲಾದ ಪ್ರವಾಸಿ ಮಹಿಳೆಯರ ನಮಾಝ್ ಕೊಠಡಿಯ ಹಾಗೂ ಉರೂಸ್ ಸಮಾರಂಭದ ಉದ್ಘಾಟನೆ ನಡೆಯಲಿದೆ. ಕೂಟು ಝಿಯಾರತ್ ಮತ್ತು ಧ್ವಜಾರೋಹಣ ನಡೆಯಲಿದೆ. ಈ ಸಂದರ್ಭ ಉದ್ಯಾವರ ಹಾಮಿದ್ ತಂಙಳ್ ಮತ್ತು ಅಬ್ದುಲ್ ಹಮೀದ್ ತಂಙಳ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂಎಸ್ ಮಹಮ್ಮದ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮೊದಲಾದವರು ಭಾಗವಹಿಸಿಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಸೀದಿ ಖತೀಬು ಇಬ್ರಾಹಿಂ ಫೈಝಿ ಪುಳಿಕ್ಕೂರು ಉಸ್ತಾದ್, ಅಧ್ಯಕ್ಷ ಕೆ.ಪಿ ಅಬ್ದುಲ್ ಖಾದರ್ ಕಟ್ಟತ್ತಿಲ, ಉರೂಸ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಪ್ರಧಾನ ಕಾರ್ಯದರ್ಶಿ ಎಸ್.ಎ ಸಿದ್ದೀಕ್ ಸಾಲೆತ್ತೂರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News