ಪ್ರೊ.ಶ್ರೀಪತಿ ಕಲ್ಲೂರಾಯಗೆ ಅಮಿಟಿ ಅಕಾಡೆಮಿಕ್ ಎಕ್ಸಲೆನ್ಸ್ ಪ್ರಶಸ್ತಿ

Update: 2020-02-20 17:10 GMT

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ರಾಷ್ಟ್ರ ಮಟ್ಟದ ಅಮಿಟಿ ಅಕಾಡೆಮಿಕ್ ಎಕ್ಸಲೆನ್ಸ್ -2020 ಪ್ರಶಸ್ತಿಗೆ ಆಯ್ಕೆಯಾಗಿ ಬುಧವಾರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಉತ್ತರ ಪ್ರದೇಶದ ನೊಯಿಡಾ ಅಮಿಟಿ ವಿಶ್ವವಿದ್ಯಾಲಯದ ಅಮಿಟಿ ಡೈರಕ್ಟರೇಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಅಲೈಡ್ ಏರಿಯಾಸ್ (ಎಡಿಎಂಎಎ) ವತಿಯಿಂದ  ಪ್ರೊ.ಶ್ರೀಪತಿ ಕಲ್ಲೂರಾಯ ಅವರನ್ನು ಸಾಂಸ್ಥಿಕ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ದಿ ಕ್ಷೇತ್ರದ ಸಾಧನೆಗಾಗಿ ಈ  ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

ಪ್ರೊ.ಕಲ್ಲೂರಾಯರು ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು,  ಪ್ರಸ್ತುತ ವಿಭಾಗದ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಮಂಗಳೂರು ವಿವಿಯಲ್ಲಿ ಹಣಕಾಸು ಅಧಿಕಾರಿಯಾಗಿ, ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯುಜಿಸಿ ಹಾಗೂ ಐಸಿಎಸ್ಎಸ್ಆರ್  ಪ್ರಾಯೋಜಿತ ಹಲವು ಪ್ರಮುಖ ಸಂಶೋಧನಾ‌ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವವನ್ನು ಹೊಂದಿರುವ ಅವರು ಅರ್ಥಶಾಸ್ತ್ರ ವಿಷಯಕ್ಕೆ‌ ಸಂಬಂಧಿಸಿದ ಒಟ್ಟು 22 ಪಠ್ಯ ಪುಸ್ತಕಗಳು ,ರಾಷ್ತ್ರೀಯ ಅಂತರಾಷ್ಟ್ರೀಯ ಜರ್ನಲ್ಸ್ ಗಳಲ್ಲಿ ಸಂಶೋಧನ ಪ್ರಬಂಧಗಳು ಪ್ರಕಟವಾಗಿವೆ. ಅಲ್ಲದೆ ಮಲೇಶಿಯಾ, ಬೀಜಿಂಗ್,  ಥೈಲಾಂಡ್ , ಕೆನಡಾ ಮೊದಲಾದ ದೇಶಗಳಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.

ಸಾಂಸ್ಥಿಕ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ದಿ ಕ್ಷೇತ್ರದ ಸಾಧಕರಾಗಿರುವ ಮಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿದ್ದು ಕೊಂಡು ಶೈಕ್ಷಣಿಕ, ಆಡಳಿತಾತ್ಮಕವಾದ  ಜವಾಬ್ದಾರಿಯನ್ನು ಯಶಸ್ವಿಯಾಗಿ‌ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News