×
Ad

2 ಬಾರ್‌ಗಳಲ್ಲಿ ಗುಂಡು ಹಾರಾಟ; ಕನಿಷ್ಠ 9 ಸಾವು

Update: 2020-02-20 23:35 IST

ಬರ್ಲಿನ್, ಫೆ. 20: ಜರ್ಮನಿಯ ಎರಡು ಶೀಶ (ಹೊಗೆಬತ್ತಿ ಸೇವಿಸುವ) ಬಾರ್‌ಗಳಲ್ಲಿ ನಡೆದ ಎರಡು ಗುಂಡು ಹಾರಾಟ ಪ್ರಕರಣಗಳಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫ್ರಾಂಕ್‌ಫರ್ಟ್ ನಗರದಿಂದ 20 ಕಿ.ಮೀ. ದೂರದಲ್ಲಿರುವ ಹನಾವು ಎಂಬಲ್ಲಿರುವ ಬಾರ್‌ಗಳಲ್ಲಿ ಬುಧವಾರ ತಡ ರಾತ್ರಿ ಗುಂಡು ಹಾರಾಟಗಳು ನಡೆದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮೊದಲ ದಾಳಿಯು ಸ್ಥಳೀಯ ಸಮಯ ರಾತ್ರಿ 10 ಗಂಟೆಗೆ ಸಂಭವಿಸಿತು. ದಾಳಿ ನಡೆಸಿದ ವ್ಯಕ್ತಿ ಬಳಿಕ ಕಾರಿನಲ್ಲಿ ಪರಾರಿಯಾಗಿದ್ದಾನೆ. ಬಳಿಕ ಇನ್ನೊಂದು ಬಾರ್‌ನಲ್ಲಿ ಇನ್ನೊಂದು ಗುಂಡು ಹಾರಾಟ ನಡೆಯಿತು. ಕನಿಷ್ಠ ಐವರು ಗಾಯಗೊಂಡಿದ್ದಾರೆ.

ತಾಯಿಯನ್ನು ಕೊಂದು ಆರೋಪಿ ಆತ್ಮಹತ್ಯೆ

ಗುಂಡು ಹಾರಾಟ ನಡೆಸಿದ ವ್ಯಕ್ತಿಯು ಕಡು ಬಲಪಂಥೀಯ ವಿಚಾರಧಾರೆಯವನಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 43 ವರ್ಷದ ಆರೋಪಿಯು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅವನ ಮನೆಯಲ್ಲಿ ಅವನು ಮತ್ತು ಅವನ ತಾಯಿಯ ಶವಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News