×
Ad

ಭಾರತದಲ್ಲಿ ನನ್ನನ್ನು 70 ಲಕ್ಷ ಜನರು ಸ್ವಾಗತಿಸಲಿದ್ದಾರೆಂದು ಮೋದಿ ಹೇಳಿದ್ದಾರೆ:ಟ್ರಂಪ್

Update: 2020-02-21 10:52 IST

 ನ್ಯೂಯಾರ್ಕ್, ಫೆ.21: ಮುಂದಿನ ವಾರ ತಾನು ಭಾರತಕ್ಕೆ ತಲುಪಿದ ತಕ್ಷಣ ಅಹ್ಮದಾಬಾದ್‌ನ 22 ಕಿ.ಮೀ.ದೂರದ ರಸ್ತೆಯಲ್ಲಿ ಸಾಗುವಾಗ 70 ಲಕ್ಷಕ್ಕೂ ಅಧಿಕ ಜನರು ಜಮಾಯಿಸಿ ತನ್ನನ್ನು ಸ್ವಾಗತಿಸಲಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತನಗೆ ಹೇಳಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಸ್ವಾಗತಿಸಲು ಸುಮಾರು ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಿದೆೆ ಎಂದು ಅಹ್ಮದಾಬಾದ್ ಮಹಾನಗರ ಪಾಲಿಕೆ ಆಯುಕ್ತರು ಗುರುವಾರ ತಿಳಿಸಿದ್ದಾರೆ.

 ‘‘ಭಾರತದ ಭೇಟಿ ವೇಳೆ 70 ಲಕ್ಷ ಜನರು ಸೇರಲಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂನತ್ತ ಸಾಗುವ ದಾರಿಯುದ್ದಕ್ಕೂ ಸುಮಾರು 50ರಿಂದ 70 ಲಕ್ಷ ಜನರು ಸೇರಲಿದ್ದಾರೆ ಎಂದು ತಿಳಿದುಬಂದಿದೆ ಎಂದು ಕೊಲಾರ್ಡೊ ಸ್ಟ್ರಿಂಗ್ಸ್‌ನಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದ ಟ್ರಂಪ್ ಹೇಳಿದ್ದಾರೆ.

ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಟ್ರಂಪ್ ಫೆಬ್ರವರಿ 24ರಂದು 22 ಕಿ.ಮೀ.ದೂರ ರಸ್ತೆ ಪ್ರಯಾಣ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News