ಫೆ. 23ರಂದು ಬ್ಲಡ್ ಸೈಬೋ ವತಿಯಿಂದ 3 ಕೇಂದ್ರಗಳಲ್ಲಿ ರಕ್ತದಾನ ಶಿಬಿರ

Update: 2020-02-21 10:08 GMT

ಮಂಗಳೂರು : ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ವತಿಯಿಂದ ವಿವಿಧ 3 ಕೇಂದ್ರಗಳಲ್ಲಿ ಏಕಕಾಲದಲ್ಲಿ ರಕ್ತದಾನ ಶಿಬಿರವು ಫೆ. 23 ರಂದು  ನಡೆಯಲಿದೆ.

ಸುರತ್ಕಲ್ ಸೆಕ್ಟರ್ ವತಿಯಿಂದ ಸುರತ್ಕಲ್ ಡಿವಿಶನ್ ಕಚೇರಿಯಲ್ಲಿ 146 ನೇ ಶಿಬಿರ, ಕಾಟಿಪಳ್ಳ ಸೆಕ್ಟರ್ ವತಿಯಿಂದ ಜಾಸ್ಮೀನ್ ಮಹಲ್ ಕಾಟಿಪಳ್ಳದಲ್ಲಿ 147 ನೇ ಶಿಬಿರ, ಮಂಗಳಪೇಟೆ ಸೆಕ್ಟರ್ ವತಿಯಿಂದ ಜನತಾ ಕಾಲನಿ ಮೈದಾನದಲ್ಲಿ 148 ನೇ ಶಿಬಿರ ನಡೆಯಲಿದೆ.

ಶಿಬಿರವು ಅಂದು ಬೆಳಗ್ಗೆ  9 ಗಂಟೆಯಿಂದ ನಡೆಯಲಿದೆ ಎಂದು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಚೇರ್ಮೇನ್ ತೌಸೀಫ್ ಸ‌ಅದಿ ಹರೇಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News