ಎಲಿಮಲೆ : ಎಂಪಿ ಕೋರ್ಸ್ ಫಾರಂ ಬಿಡುಗಡೆ

Update: 2020-02-21 10:13 GMT

ಸುಳ್ಯ : ಸುಳ್ಯ ತಾಲೂಕಿನ ಎಲಿಮಲೆ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ವತಿಯಿಂದ ನಡೆಯಲಿರುವ  ಮರಣೋತ್ತರ ಇಸ್ಲಾಮೀ ವಿಧಿ ವಿಧಾನಗಳ ಬಗ್ಗೆ ಕಲಿಸುವ ಎಂಪಿ ಕೋರ್ಸ್ ಫೆ.28 ರಂದು ಎಲಿಮಲೆ ನೂರುಲ್ ಹುದಾ ಮದ್ರಸದಲ್ಲಿ ಪ್ರಾರಂಭಗೊಳ್ಳಲಿದ್ದು ಇದರ ಪ್ರವೇಶ ಪತ್ರದ ಬಿಡುಗಡೆಯು ಎಲಿಮಲೆ ಜುಮಾ ಮಸೀದಿಯಲ್ಲಿ ನಡೆಯಿತು.

ಸ್ಥಳೀಯ ಮುದರ್ರಿಸ್  ತೌಸೀಫ್ ಸಅದಿ ಹರೇಕಳ  ಬಿಡುಗಡೆಗೊಳಿಸಿದರು. ಮಸೀದಿ ಸಮಿತಿ ಉಪಾಧ್ಯಕ್ಷ  ಅಬ್ದುಲ್ ಖಾದರ್ ಪಾಣಾಜೆ, ಜೀರ್ಮಕ್ಕಿ ಮಸೀದಿ ಅಧ್ಯಕ್ಷ  ಅಬ್ದುಲ್ಲ ಜೀರ್ಮಕ್ಕಿ, ಜಮಾಅತ್ ಆಡಳಿತ ಕಾರ್ಯದರ್ಶಿ ಇಬ್ರಾಹಿಂ ದೊಡ್ಡಂಗಡಿ, ಜಮಾಅತ್ ಸಲಹೆಗಾರರಾದ ಮೂಸ ಹಾಜಿ, ಜೀರ್ಮಕ್ಕಿ ಮಸೀದಿ ಇಮಾಂ ಸೂಫಿ ಮುಸ್ಲಿಯಾರ್, ಮದ್ರಸ ಮುಖ್ಯೋಪಾಧ್ಯಾಯ ಮಹಮೂದ್ ಸಖಾಫಿ, ಮಹಮದ್ ಕುಂಞಿ ಹರ್ಲಡ್ಕ ಹಾಗೂ ನುಸ್ರತ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News