ಮುಕ್ಕ ಅಂಜುಮಾನ್ ಮದರಸದಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮ

Update: 2020-02-21 10:53 GMT

ಮಂಗಳೂರು : ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಕೌನ್ಸಿಲ್ -ಮಸ್ಜಿದ್ ಒನ್ ಮೂವ್ಮೆಂಟ್  ದ.ಕ ಜಿಲ್ಲಾ ಚಾಪ್ಟರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ ಜಿಲ್ಲಾ ವತಿಯಿಂದ ಜುಮಾ ಮಸೀದಿ ಮುಕ್ಕ ಇವರ ಸಹಕಾರದಿಂದ ಸಾರ್ವಜನಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮ ಮುಕ್ಕ ಅಂಜುಮನ್ ಸಿರಾಜುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ SAST ವಿಭಾಗದ ಸಂಯೋಜಕರಾದ ಸಚ್ಚಿದಾನಂದ ಎಂ.ಎಲ್ ಆಯುಷ್ಮಾನ್  ಆರೋಗ್ಯ ಕಾರ್ಡ್‌ ಉಪಯೋಗಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ದ.ಕ ಜಿಲ್ಲಾ ಸೇವಾ ಸಿಂಧು ಮುಖ್ಯಸ್ಥೆ ಅಕ್ಷತಾ ಹಾಗೂ ತಾಂತ್ರಿಕ ಸಹಾಯಕ ಸಿಬ್ಬಂದಿ ಗಾಯತ್ರೀ ಕಾರ್ಡ್ ನೋಂದಣಿಗೆ ಸಹಕರಿಸಿದರು. ಜುಮಾ ಮಸೀದಿ ಮುಕ್ಕ ಅಧ್ಯಕ್ಷ ಹಾಜಿ .ಎಂ ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಸ್ಜಿದ್ ಒನ್ ಮೂವ್ಮೆಂಟ್ ನ ಕಾರ್ಯಕ್ರಮ ಸಂಯೋಜಕ ಅಬ್ದುಲ್ ಖಾದರ್ ,ಅಂಜುಮಾನ್ ಸಂಸ್ಥೆಯ ಮುಖ್ಯಸ್ಥರಾದ ಇದ್ದಿನಬ್ಬ ಮುಂತಾದವರು ಉಪಸ್ಥಿತರಿದ್ದರು.

ಒಟ್ಟು 207 ಮಂದಿ ಹೊಸ ಕಾರ್ಡ್ ನೋಂದಣಿ ಮಾಡಿಸಿಕೊಂಡರು. ಜುಮಾ ಮಸೀದಿ ಮುಕ್ಕ ಇದರ ಪ್ರ.ಕಾರ್ಯದರ್ಶಿ ಉಮರ್ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲೆಯ ವಿವಿಧ ಜಮಾಅತ್ ವ್ಯಾಪ್ತಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಜಂಟಿಯಾಗಿ ಆಯೋಜಿಸಲು ಇಚ್ಚಿಸುವ ಸಂಸ್ಥೆಗಳು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದಾಗಿದೆ.‌ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಕೌನ್ಸಿಲ್-ಮಸ್ಜಿದ್ ಒನ್ ಮೂವ್ಮೆಂಟ್ ದ.ಕ ಜಿಲ್ಲಾ ಚಾಪ್ಟರ್, ಬಾವುಟಗುಡ್ಡೆ ಈದ್ಗಾ ಮಸೀದಿ ಎದುರು, ಲೈಟ್ ಹೌಸ್ ಹಿಲ್ಲ್ , ಮಂಗಳೂರು.ಮೊ.ಸಂ 9606622638

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News