"ನನಗೊಂದು ಹಗ್ಗ ಕೊಡಿ, ನಾನು ಸಾಯುತ್ತೇನೆ"

Update: 2020-02-21 11:21 GMT

ಸಿಡ್ನಿ: ಶಾಲೆಯಲ್ಲಿ ಇತರ ಸಹಪಾಠಿಗಳಿಂದ ಹಿಂಸೆಗೊಳಗಾಗಿ ತೀವ್ರ ನೊಂದು  ತನಗೆ ಪ್ರಾಣ ಕಳೆದುಕೊಳ್ಳಬೇಕು ಎಂದು ಅಳುತ್ತಿರುವ ತನ್ನ ಒಂಬತ್ತು ವರ್ಷದ ಪುತ್ರನ ಮನಕಲಕುವ ವೀಡಿಯೋವನ್ನು ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಫೇಸ್ ಬುಕ್‍ ನಲ್ಲಿ ಶೇರ್ ಮಾಡಿದ್ದಾರೆ.

ಯರ್ರಕ ಬೇಲ್ಸ್ ಎಂಬ ಹೆಸರಿನ ಮಹಿಳೆ ಬುಧವಾರ ಬ್ರಿಸ್ಬೇನ್‍ ನ ಶಾಲೆಯೊಂದರಿಂದ ತನ್ನ ಪುತ್ರ ಖ್ವಾಡೆನ್‍ ನನ್ನು ವಾಪಸ್  ಕರೆತರುತ್ತಿರುವಾಗ ಕುಬ್ಜತೆಯ ಸಮಸ್ಯೆಯಿರುವಂತೆ ಕಾಣುವ ಶಾಲಾ ಸಮವಸ್ತ್ರದಲ್ಲಿರುವ ಬಾಲಕ ಕಾರಿನ ಸೀಟಿಗೆ ಒರಗಿಕೊಂಡು ಜೋರಾಗಿ ಅಳುತ್ತಾ "ನನಗೊಂದು ಹಗ್ಗ ಕೊಡಿ,  ನಾನು ಸಾಯುತ್ತೇನೆ'' ಎಂದು ಹೇಳುತ್ತಿರುವುದು ಕೇಳಿಸುತ್ತದೆ.

"ನನ್ನ ಪುತ್ರನನ್ನು ಈಗಷ್ಟೇ ಶಾಲೆಯಿಂದ ಕರೆತಂದಿದ್ದೇನೆ. ಆತನಿಗೆ ಶಾಲೆಯಲ್ಲಿ ಮಕ್ಕಳು ತೊಂದರೆ ನೀಡುವುದನ್ನು ನೋಡಿದ್ದೇನೆ. ಪ್ರಾಂಶುಪಾಲರಿಗೆ ಈ ಬಗ್ಗೆ ತಿಳಿಸಿದ್ದೇನೆ. ಈ ರೀತಿ ತೊಂದರೆ ನೀಡಿದರೆ ಅದರ ಪರಿಣಾಮವಿದು ಎಂದು ಹೆತ್ತವರು, ಶಿಕ್ಷಕರು ತಿಳಿಯಬೇಕೆಂದು ಬಯಸುತ್ತೇನೆ'' ಎಂದು ಆಕೆ ಬರೆದಿದ್ದಾರೆ.

"ನನಗೆ ನನ್ನ ಎದೆಗೆ ತಿವಿಯಬೇಕು ಎಂದೆನಿಸುತ್ತದೆ.  ಯಾರಾದರೂ ನನ್ನನ್ನು ಸಾಯಿಸಬೇಕೆಂದೆನಿಸುತ್ತದೆ'' ಎಂದು ಈ ವೀಡಿಯೋದಲ್ಲಿ ಬಾಲಕ ಹೇಳುತ್ತಾನೆ.

ಶಾಲೆಯಲ್ಲಿ ಇನ್ನೊಬ್ಬ ವಿದ್ಯಾರ್ಥಿ ಖ್ವಾಡೆನ್ ತಲೆಗೆ ಕುಟ್ಟುತ್ತಿರುವುದು ಹಾಗೂ ಆತನ ಕುಬ್ಜತೆಯನ್ನು ತಮಾಷೆ ಮಾಡುತ್ತಿರುವುದನ್ನು ನೋಡಿದೆ ಎಂದು  ಬಾಲಕನ ತಾಯಿ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News