×
Ad

ಕುಟುಂಬ ಜೀವನದ ಬಗ್ಗೆ ಅಧ್ಯಯನ ಮಾಡಬೇಕು: ಬೇಕಲ ಉಸ್ತಾದ್

Update: 2020-02-21 17:01 IST

ಉಳ್ಳಾಲ : ದಾನಧರ್ಮ ಏನಿದ್ದರೂ ಮೊದಲು ನೀಡಬೇಕಾದ್ದು ಕುಟುಂಬದ ಜನರಿಗಾಗಿದೆ. ಮೊದಲು ಕುಟುಂಬಸ್ಥರಿಗೆ ಸಹಕಾರ ನೀಡಬೇಕು. ಕುಟುಂಬ ಜೀವನ ಯಾವ ರೀತಿಯಲ್ಲಿರಬೇಕು. ಹೇಗೆ ಹೊಂದಿಕೊಂಡು ಹೋಗಬೇಕು ಎಂಬುದನ್ನು ಮೊದಲು ಅಧ್ಯಯನ ಮಾಡಬೇಕು ಎಂದು ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಹೇಳಿದರು.

ಅವರು ಕಿನ್ಯ ಕೇಂದ್ರ ಜುಮ್ಮಾ ಮಸೀದಿಯಲ್ಲಿ ನಡೆಯುತ್ತಿರುವ ಕೂಟು ಝಿಯಾರತ್ ನ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಉಪನ್ಯಾಸ  ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು.  ಕಾರ್ಯಕ್ರಮದಲ್ಲಿ ಫಾರೂಕ್ ದಾರಿಮಿ, ಹೈದರ್ ಉಸ್ತಾದ್, ಕಿನ್ಯ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷ ರಾದ ಅಶ್ರಫ್ ಮಾರಾಠಿ ಮೂಲೆ, ಇಬ್ರಾಹಿಂ, ಕುಂಞಿ ಹಾಜಿ, ಕಾರ್ಯದರ್ಶಿ ಹಮೀದ್ ಕಿನ್ಯ, ಇಸ್ಮಾಯಿಲ್  ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News