'ಪಾಕಿಸ್ತಾನ ಝಿಂದಾಬಾದ್' ಘೋಷಣೆ ವಿರೋಧಿಸಿ ವಿಹಿಂಪ, ಬಜರಂಗದಳ ಪ್ರತಿಭಟನೆ

Update: 2020-02-21 14:28 GMT

ಮಂಗಳೂರು, ಫೆ.21: ಸಿಎಎ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಲಿಯೋನ್ ‘ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿರುವುದನ್ನು ಖಂಡಿಸಿ ವಿಹಿಂಪ, ಬಜರಂಗದಳ ನೇತೃತ್ವದಲ್ಲಿ ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಹಿಂಪ ಮುಖಂಡ ಎಂ.ಬಿ. ಪುರಾಣಿಕ್, ಪಾಕಿಸ್ತಾನ ಝಿಂದಾಬಾದ್ ಕೂಗಿದ ಅಮೂಲ್ಯ ಹಿಂದಿರುವ ದುಷ್ಟಶಕ್ತಿಯ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್, ಅಮೂಲ್ಯ ಘೋಷಣೆ ಬಗ್ಗೆ ಎನ್‌ಐಎ ತನಿಖೆಯಾಗಬೇಕು. ಆಕೆಯ ಹೇಳಿಕೆಯ ಹಿಂದೆ ಪಾಕಿಸ್ತಾನದ ಭಯೋತ್ಪಾದಕರ ಕೈವಾಡದ ಸಾಧ್ಯತೆ ಇದೆ ಎಂದು ತಿಳಿಸಿದರು.

ಪ್ರತಿಭಟನಾ ಸಭೆಯಲ್ಲಿ ಗೋಪಾಲ್ ಕುತ್ತಾರ್, ಶಿವಾನಂದ ಮೆಂಡನ್, ರವಿ ಅಸೈಗೋಳಿ, ಪುನೀತ್ ಅತ್ತಾವರ, ಮುರುಳೀಧರ್ ರಾವ್, ಸುರೇಖಾ ರಾಜ್, ಅಶಾ ಜಗದೀಶ್, ಸಂತೋಷ್ ಕದ್ರಿ, ಗುರು ಪ್ರಸಾದ್ ಉಳಾಲ, ಚರಣ್‌ರಾಜ್ ಕುಲಶೇಖರ, ವಿಶಾಲಾಕ್ಷಿ ಸುರತ್ಕಲ್, ಗೋಷಿತಾ ಮೊದಲಾದವರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News