ಮಂಗಳೂರು: ಫೆ.22ರಂದು ರೈಲು ಸಂಚಾರದಲ್ಲಿ ವ್ಯತ್ಯಯ

Update: 2020-02-21 15:16 GMT

ಮಂಗಳೂರು, ಫೆ. 21: ಪಣಂಬೂರು ವಿಭಾಗದ ಮಂಗಳೂರು ಜಂಕ್ಷನ್ ಹಾಗೂ ಪಡೀಲ್ ರೈಲು ನಿಲ್ದಾಣ ನಡುವೆ ದ್ವಿಪಥ ರೈಲುಹಳಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ರೈಲುಗಳ ಸೇವೆಯಲ್ಲಿ ಹೆಚ್ಚುವರಿ ಬದಲಾವಣೆ ಮಾಡಲಾಗಿದೆ. ಇದರಿಂದ ಫೆ.22ರಂದು ಎರಡು ರೈಲುಗಳ ಸಂಚಾರ ರದ್ದುಗೊಂಡಿದ್ದು, ಇನ್ನು ಹಲವು ರೈಲುಗಳ ಸಂಚಾರದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ.

ಪ್ಯಾಸೆಂಜರ್ ರೈಲು ಸಂಚಾರ ರದ್ದು: ಪಣಂಬೂರು ವಿಭಾಗದಲ್ಲಿ ರೈಲು ಹಳಿಗಳ ನಿರ್ಮಾಣ ಕಾಮಗಾರಿ ಮುಂದುವರಿದಿರುವುದಿಂದ ಫೆ.22ರಂದು ಎರಡು ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮಂಗಳೂರು ಸೆಂಟ್ರಲ್‌ನಿಂದ ಸುಬ್ರಹ್ಮಣ್ಯ ಮಾರ್ಗವಾಗಿ ತೆರಳುವ ಟ್ರೇನ್ ನಂ. 56647, 56646 ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಒಂದು ದಿನದವರೆಗೆ ರದ್ದುಗೊಂಡಿದೆ.

ಫೆ.22ರಂದು ಮಂಗಳೂರು ಸೆಂಟ್ರಲ್‌ನಿಂದ ಕಬಕ-ಪುತ್ತೂರಿಗೆ ತೆರಳುವ ಪ್ಯಾಸೆಂಜರ್ ರೈಲು (56645) ಸಂಚಾರದಲ್ಲಿ 45 ನಿಮಿಷ ತಡವಾಗಲಿದೆ.

ಮಂಗಳೂರು ಜಂಕ್ಷನ್‌ನಿಂದ 4:20ಕ್ಕೆ ತೆರಳಲಿರುವ ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ (07328) ರೈಲು 5:50ಕ್ಕೆ (1 ಗಂಟೆ 30 ನಿಮಿಷ ತಡವಾಗಿ) ಹೊರಡಲಿದೆ.

ಫೆ.28ರಂದು ಕೇರಳದ ಎರ್ನಾಕುಲಂನಿಂದ ಬೆಳಗ್ಗೆ 5:15ಕ್ಕೆ ನಿರ್ಗಮಿಸುವ ಎರ್ನಾಕುಲಂ-ಪುಣೆ ಎಕ್ಸ್‌ಪ್ರೆಸ್ (22149) ರೈಲು 6:15ಕ್ಕೆ (1 ಗಂಟೆ ತಡವಾಗಿ) ಪ್ರಯಾಣ ಬೆಳೆಸಲಿದೆ.

ಫೆ. 28ರಂದು ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 11:30ಕ್ಕೆ ಹೊರಡುವ ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್‌ಪ್ರೆಸ್ (16576) ರೈಲು ಮಧ್ಯಾಹ್ನ 1:30ಕ್ಕೆ (2 ಗಂಟೆ ತಡವಾಗಿ) ಪ್ರಯಾಣ ಬೆಳೆಸಲಿದೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಕೆ. ಗೋಪಿನಾಥ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News