ಎಸ್‌ಬಿಐನಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ನ್ಯುಮರೊ ಯೊನೊ’ ಕ್ವಿಝ್ ಸ್ಪರ್ಧೆ

Update: 2020-02-21 15:16 GMT
ಫೈಲ್ ಚಿತ್ರ

ಹೊಸದಿಲ್ಲಿ,ಫೆ.21: ಎಐಸಿಟಿಇ ಮತ್ತು ಯುಜಿಸಿ ಮಾನ್ಯತೆ ಹೊಂದಿರುವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಎಸ್‌ಬಿಐ ‘ನ್ಯುಮರೊ ಯೊನೊ’ ಕ್ವಿಝ್ ಸ್ಪರ್ಧೆಯನ್ನು ಪ್ರಕಟಿಸಿದೆ. ಬ್ಯಾಂಕಿನ ಏಕೀಕೃತ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಯೊನೊ ಎಸ್‌ಬಿಐ ಫೆ.24ರಿಂದ ಮಾ.5ರವರೆಗೆ ಭಾರತದ 17 ನಗರಗಳಲ್ಲಿ ಈ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.

ದೇಶದ ಅತ್ಯುತ್ತಮ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವ ನ್ಯುಮರೊ ಯೊನೊ ರಾಷ್ಟ್ರಮಟ್ಟದಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸುವ ಅವಕಾಶವನ್ನು ಅವರಿಗೆ ಒದಗಿಸಲಿದೆ ಎಂದು ಎಸ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

17 ನಗರಗಳಲ್ಲಿ ಪ್ರಾದೇಶಿಕ ಸುತ್ತುಗಳ ಸ್ಪರ್ಧೆ ನಡೆಯಲಿದ್ದು,ಪ್ರತಿ ಪ್ರದೇಶದಿಂದ ಒಂದು ತಂಡವನ್ನು ಸೆಮಿಫೈನಲ್‌ಗಳಿಗೆ ಆಯ್ಕೆ ಮಾಡಲಾಗುವುದು. ಸೆಮಿಫೈನಲ್ ಮತ್ತು ಫೈನಲ್ ಸುತ್ತುಗಳು ಮುಂಬೈನಲ್ಲಿ ನಡೆಯಲಿವೆ.

ಪ್ರತಿ ಹಂತದಲ್ಲಿಯೂ ಅಗ್ರ ಮೂವರು ವಿಜೇತರಿಗೆ ಆಕರ್ಷಕ ವಿದ್ಯಾರ್ಥಿವೇತನ ಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಡಿಜಿಟಲ್ ಪ್ರಮಾಣಪತ್ರಗಳನ್ನು ಪಡೆಯಲಿದ್ದಾರೆ ಎಂದು ಎಸ್‌ಬಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News