ಚಿನ್ನಾಭರಣ ಕಳವು: ಆರೋಪಿ ಬಂಧನ

Update: 2020-02-21 16:53 GMT

ಉಡುಪಿ, ಫೆ.21: ನಗರದ 76ಬಡಗುಬೆಟ್ಟು ಮಿಷನ್ ಕಾಂಪೌಂಡ್‌ನ ಮನೆಯೊಂದರ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸರು ಶನಿವಾರ ಬಂಧಿಸಿದ್ದು, 3.5 ಲಕ್ಷ ರೂ. ವೌಲ್ಯದ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಬೆಂಗಳೂರು ವಸಂತಪುರ ಮುಖ್ಯ ರಸ್ತೆಯ ಶಾರದಾ ನಗರ ನಿವಾಸಿ ವಸಂತ ಕುಮಾರ್ (27) ಬಂಧಿತ ಆರೋಪಿಯಾಗಿದ್ದಾನೆ. ಇವರು 2019ರ ನ. 28 ರಿಂದ 2020 ಫೆ.12ರ ಮಧ್ಯಾವಧಿಯಲ್ಲಿ 76 ಬಡಗುಬೆಟ್ಟು ಮಿಷನ್ ಕಂಪೌಂಡ್ ಬಳಿ ಬಾಡಿಗೆ ಮನೆಯಲ್ಲಿದ್ದ ಜಯಶ್ರೀ ಕಾಂಚನ್ ಅವರ 4 ಪವನ್ ತೂಕದ ಹವಳದ ಮಣಿಸರ, 7 ಪವನ್ ತೂಕದ ಶಿವಾಜಿ ಚೈನ್ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದ ಎಂದು ದೂರಲಾಗಿದೆ.

ಉಡುಪಿ ವೃತ್ತ ಸಿಪಿಐ ಮಂಜುನಾಥ ನೇತೃತ್ವದ ತಂಡ, ಫೆ.15ರಂದು ಆರೋಪಿಯನ್ನು ವಶಕ್ಕೆ ಪಡೆದು ತನಿಖೆಯ ಬಳಿಕ ಬಂಧಿಸಿದ್ದು, ಆರೋಪಿ ಯಿಂದ ಕಳವು ಮಾಡಿ ಅಡವಿಟ್ಟ 3.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಗಳನ್ನು ಸ್ವಾಧೀನ ಪಡಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News