×
Ad

ಫೆ. 23: ಮಂಗಳೂರಿನಲ್ಲಿ ಬಹುಭಾಷಾ ರಂಗಹಬ್ಬ-2020

Update: 2020-02-22 14:30 IST

ಮಂಗಳೂರು : ಪಾದುವ ಕಾಲೇಜಿನ ನಾಟಕ ತಂಡ ಪಾದುವ ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ ಮಂಗಳೂರು, ಲೋಗೋಸ್ ಥಿಯೇಟರ್ ಟ್ರೂಪ್ ಮಂಗಳೂರು ಇವರ ಆಶ್ರಯದಲ್ಲಿ ಈ ವರ್ಷದ ಬಹುಭಾಷಾ ರಂಗಹಬ್ಬವನ್ನು ಆಯೋಜಿಸಿದ್ದಾರೆ.

ಫೆ.23ರಂದು ರಂಗಾಯಣ ಮೈಸೂರು ಪ್ರಸ್ತುತ ಪಡಿಸುವ "ಪಾಪು ಗಾಂಧಿ, ಗಾಂಧಿ ಬಾಪು ಆದ ಕಥೆ" ನಾಟಕದ ಪ್ರದರ್ಶನವಿದೆ. ಅದೇ ದಿನ ಅಸ್ತಿತ್ವ ಮಂಗಳೂರು ಇವರು ಅಭಿನಯಿಸುವ "ಹ್ಯಾಂಗರ್ಸ್" ಎಂಬ ನಾಟಕವೂ ಪ್ರದರ್ಶನಗೊಳ್ಳಲಿದೆ. ಇದೇ ಸಂದರ್ಭ ವಿಜಯಲಕ್ಷ್ಮಿ ರಚಿಸಿರುವ ಚೊಚ್ಚಲ ಕವನ ಸಂಕಲನ "ನನ್ನೊಳಗಿನ ನಿನಗೆ" ಇದರ ಬಿಡುಗಡೆ ಸಮಾರಂಭವೂ ಇದೆ.

ರಂಗಹಬ್ಬದ ಮುಂದಿನ ಭಾಗವಾಗಿ ಮಾ. 1 ರಂದು ಲೋಗೋಸ್ ಥಿಯೇಟರ್ ಟ್ರೂಪ್ ಅಭಿನಯಿಸುವ, ವಂದನೀಯ ಆಲ್ವಿನ್ ಸೆರಾವೊರವರು ರೂಪಾಂತರಿಸಿದ "ನಾಗ್ಡಿಂ" ಎಂಬ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ಮಾ. 8ರಂದು "ವಿಂಚೊವ್ಣ್" ಕೊಂಕಣಿ ನಾಟಕ ಪ್ರದರ್ಶನ ಗೊಳ್ಳಲಿದ್ದು, ಮಾ. 9 ರಂದು "ನಾಗ್ಡಿಂ" ನಾಟಕ ಮರು ಪ್ರದರ್ಶನಗೊಳ್ಳಲಿದೆ‌. ಮಾ. 10ರಂದು ಪಾದುವ ರಂಗ ಅಧ್ಯಯನ ಕೇಂದ್ರದ "ಕೆಂಡೋನಿಯನ್ಸ್" ನಾಟಕ ಕನ್ನಡದಲ್ಲಿ ಪ್ರದರ್ಶನಗೊಳ್ಳಲಿದೆ. ಸಮಾರೋಪದ ಭಾಗವಾಗಿ ಮಾ. 11ರಂದು "ಪೆದ್ರು" ಎಂಬ ಕೊಂಕಣಿ ನಾಟಕ ಆಪ್ತರಂಗಭೂಮಿಯ ಮಾದರಿಯಲ್ಲಿ ಪ್ರದರ್ಶನಗೊಳ್ಳಲಿದೆ.

ಕಳೆದ ವರ್ಷದಂತೆ ಈ ಸಲವೂ ರಂಗಭೂಮಿಯ ಹಿನ್ನೆಲೆಯಲ್ಲಿ ದುಡಿದ ರಂಗಕರ್ಮಿಗಳಿಗೆ ಗೌರವಾರ್ಪಣೆ ನಡೆಯಲಿದೆ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಈ ಎಲ್ಲಾ ಪ್ರದರ್ಶನಗಳು ಪಾದುವ ಕಾಲೇಜಿನ ಬಯಲು ರಂಗಮಂದಿರ, "ಪಾದುವ ಥಿಯೇಟರ್ ಹಬ್" ಇಲ್ಲಿ ಉಚಿತವಾಗಿ ಪ್ರದರ್ಶನಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News