ಮೊದಲ ಟೆಸ್ಟ್: ಭಾರತ-ನ್ಯೂಝಿಲ್ಯಾಂಡ್ ಸಮಬಲದ ಹೋರಾಟ

Update: 2020-02-22 09:23 GMT

ವೆಲ್ಲಿಂಗ್ಟನ್, ಫೆ.22: ಇಶಾಂತ್ ಶರ್ಮಾ ಅವರ ಅಮೋಘ ಬೌಲಿಂಗ್ ಹಾಗೂ ಕೇನ್ ವಿಲಿಯಮ್ಸನ್‌ರ ಆಕರ್ಷಕ ಅರ್ಧಶತಕಕ್ಕೆ ಸಾಕ್ಷಿಯಾದ ಮೊದಲ ಟೆಸ್ಟ್ ಪಂದ್ಯದ 2ನೇ ದಿನವಾದ ಶನಿವಾರ ಭಾರತ ಹಾಗೂ ನ್ಯೂಝಿಲ್ಯಾಂಡ್ ಸಮಬಲದ ಹೋರಾಟ ನೀಡಿದವು.

ಮತ್ತೊಮ್ಮೆ ಕೆಳ ಕ್ರಮಾಂಕದ ಬ್ಯಾಟಿಂಗ್ ಕುಸಿತಕ್ಕೊಳಗಾದ ಭಾರತ ಮೊದಲ ಇನಿಂಗ್ಸ್‌ನಲ್ಲಿ 165 ರನ್‌ಗೆ ಆಲೌಟಾಯಿತು. ಇದಕ್ಕೆ ಉತ್ತರವಾಗಿ ನ್ಯೂಝಿಲ್ಯಾಂಡ್ ತಂಡ ವಿಲಿಯಮ್ಸನ್ 89 ರನ್ ಗಳಿಸಿದ ಹೊರತಾಗಿಯೂ ದಿನದಾಟದಂತ್ಯಕ್ಕೆ 216 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ಒಟ್ಟು 51 ರನ್ ಮುನ್ನಡೆಯಲ್ಲಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ವೇಗದ ಬೌಲರ್ ಇಶಾಂತ್ 15 ಓವರ್‌ಗಳಲ್ಲಿ 31 ರನ್‌ಗೆ ಮೂರು ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದರು.

ಮುಹಮ್ಮದ್ ಶಮಿ(1-61)ದಿನದ ಕೊನೆಯ ಸ್ಪೆಲ್‌ನಲ್ಲಿ ವಿಲಿಯಮ್ಸನ್ ವಿಕೆಟನ್ನು ಪಡೆದು ಭಾರತಕ್ಕೆ ಮೇಲುಗೈ ಒದಗಿಸಿದರು. ಇದಕ್ಕೂ ಮೊದಲು ತಲಾ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ ಕೈಲ್ ಜಮೀಸನ್(4-49) ಹಾಗೂ ಟಿಮ್ ಸೌಥಿ(4-49) ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ 68.1 ಓವರ್‌ಗಳಲ್ಲಿ 165 ರನ್‌ಗೆ ಆಲೌಟ್ ಮಾಡಿದರು. 5 ವಿಕೆಟ್ ನಷ್ಟಕ್ಕೆ 122 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ನಿನ್ನೆಯ ಸ್ಕೋರ್‌ಗೆ ಕೇವಲ 43 ರನ್ ಸೇರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News