ಬಿ.ಸಿ.ರೋಡ್ : ಫೆ. 24ರಂದು ಸಅದಿಯ್ಯ ಗ್ರ್ಯಾಂಡ್ ಅಲುಮ್ನಿ ಸಂಗಮ

Update: 2020-02-22 09:36 GMT

ಬಿ.ಸಿ.ರೋಡ್ : ಸಅದಿಯ್ಯ ಗ್ರ್ಯಾಂಡ್ ಅಲುಮ್ನೀ ಸಂಗಮ ಅವಿಭಜಿತ ದ.ಕ. ಮತ್ತು ಕಾಸರಗೋಡು ಜಿಲ್ಲೆಯ ಪ್ರತಿಷ್ಠಿತ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಸಮುಚ್ಛಯ ಜಾಮಿಅಃ ಸ'ಅದಿಯ್ಯ ಅರಬಿಯ್ಯ ಇದರ ಪೂರ್ವ ವಿದ್ಯಾರ್ಥಿಗಳ ಮಹಾ ಸಂಗಮವು  ಫೆ.24ರಂದುಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿರುವ ಹಾಫಿಳ್ ತೌಸೀಫ್ ಸ'ಅದಿ ವೇದಿಕೆ, ಸಾಗರ್ ಆಡಿಟೋರಿಯಂ ನಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 9:30ಕ್ಕೆ ರಿಜಿಸ್ಟ್ರೇಶನ್ ಆರಂಭವಾಗಲಿದ್ದು 10 ಕ್ಕೆ ಸಅದಿಯ್ಯ ಅಧ್ಯಕ್ಷ ಅಸ್ಸಯ್ಯಿದ್ ಕುಂಬೋಲ್ ತಂಙಳ್ ದುಆ ಗೈದು ಉದ್ಘಾಟಿಸಲಿದ್ದು, ತಾಜುಲ್ ಫುಖಹಾ ಬೇಕಲ್ ಉಸ್ತಾದ್ ಮುಖ್ಯ ಸಂದೇಶ ಭಾಷಣಗೈಯ್ಯಲಿದ್ದಾರೆ.

ಅಶ್ರಫ್ ಸ'ಅದಿ ಮಲ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಮಸ್ತ ಮುಶಾವರ ಸದಸ್ಯ ತ್ರಕರಿಪ್ಪೂರ್ ಮುಹಮ್ಮದ್ ಅಲೀ ಸಖಾಫಿ ಹಾಗೂ ಅರೆಬಿಕ್ ತಜ್ಞ ಉಬೈದುಲ್ಲಾಹಿ ಸ'ಅದಿ ಮುಖ್ಯ ತರಗತಿ ನಡೆಸಲಿದ್ದಾರೆ. 

ಸ'ಅದಿಯ್ಯಾ ಪ್ರೊ. ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಯೋಜನೆ ಮಂಡಿಸಿ ಚರ್ಚೆಗೆ ನಾಯಕತ್ವ ವಹಿಸಲಿದ್ದು ಸಅದಿಯ್ಯ ಪ್ರೊ. ಸ್ವಾಲಿಹ್ ಸಅದಿ ಉಸ್ತಾದ್, ಸಅದಿಯ್ಯ ಉರ್ದು ವಿಭಾಗದ ಮುಖ್ಯಸ್ಥ  ಲತೀಫ್ ಸಅದಿ ಕೊಟ್ಟಿಲ, ಆರ್ಟ್ಸ್ ಅಂಡ್ ಸೈನ್ಸ್ ಮುಖ್ಯಸ್ಥ ಶರಫುದ್ದೀನ್ ಸಅದಿ, ಬೋರ್ಡಿಂಗ್ ಮುಖ್ಯಸ್ಥ ಪಲ್ಲಂಗೋಡ್ ಅಬ್ದುಲ್ ಖಾದರ್ ಮದನಿ, ವಳವೂರು ಸಅದೀ ಉಸ್ತಾದ್, ಶಾಫೀ ಸಅದಿ ಬೆಂಗಳೂರು, ಉಸ್ಮಾನ್ ಸಅದಿ ಪಟ್ಟೋರಿ, ಮುಸ್ತಫಾ ಸಅದಿ ಮೂಳೂರು, ಹಫೀಳ್ ಸಅದಿ ಕೊಡಗು, ಜಬ್ಬಾರ್ ಸಅದಿ ಶಿವಮೊಗ್ಗ, ಅಬ್ದುಲ್ಲ ಸಅದಿ ಅಜ್ಜಾವರ ಚಿಕ್ಕಮಗಳೂರು ಮುಂತಾದವರು ಭಾಗವಹಿಸಲಿದ್ದಾರೆ ಗ್ರ್ಯಾಂಡ್ ಅಲುಮ್ನಿ ಸಂಗಮ ನಿರ್ವಹಣಾ ಸಮಿತಿ ಕರ್ನಾಟಕ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News