ಧಾರ್ಮಿಕ ಗ್ರಂಥಗಳು ಸೌಹಾರ್ದತೆಯನ್ನು ಸಾರುವ ಬೇರು: ರೆ.ಫಾ.ಎಂ. ಪ್ರಭುರಾಜ್

Update: 2020-02-22 09:46 GMT

ಉಳ್ಳಾಲ: ಧಾರ್ಮಿಕ ಗ್ರಂಥಗಳು ಸೌಹಾರ್ದತೆಯನ್ನು ಸಾರುವ ಬೇರು. ಎಲ್ಲಾ ಧರ್ಮಗಳ ಗ್ರಂಥಗಳು ಮಾನವ ಏಕತೆ ಮತ್ತು ಘನತೆಯ ವಿಚಾರಗಳು ಒಳಗೊಂಡಿವೆ. ಆದರೆ ಅದನ್ನು ಪಾಲಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ. ಗ್ರಂಥಗಳ ಬಗ್ಗೆ ಅಧ್ಯಯನ ಮಾಡಿದರೆ ಮಾನವ ಸಮುದಾಯದ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಸರ್ಗೆಂಟ್ ಮೆಮೋರಿಯಲ್ ಚರ್ಚ್‍ನ ಧರ್ಮಗುರು ರೆ. ಫಾ. ಎಂ. ಪ್ರಭುರಾಜ್ ಹೇಳಿದರು.

ಅವರು ಜಮಾಅತೆ ಇಸ್ಲಾಮಿ ಹಿಂದ್ ಇದರ ಆಶ್ರಯದಲ್ಲಿ ತೊಕ್ಕೊಟ್ಟುವಿನಲ್ಲಿ ನಡೆದ ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬ್ ಮಹಮ್ಮದ್ ಕುಂಞಿ ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಮಾಡಿದರು. ಕೊಲ್ಯ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ವೇದಮೂರ್ತಿ ಭಾಸ್ಕರ ಐತಾಳ್, ಮದನಿ ಪ.ಪೂ. ಪ್ರಾಂಶುಪಾಲ ಇಸ್ಮಾಯಿಲ್ ಟಿ., ಜಮಾಅತೆ ಇಸ್ಲಾಮಿ ಉಳ್ಳಾಲ ಅಧ್ಯಕ್ಷ  ಅಬ್ದುಲ್ ಕರೀಂ, ಉಪಾಧ್ಯಕ್ಷ ಅಬ್ದುಲ್ ರಹೀಂ  ಮೊದಲಾದವರು ಉಪಪಸ್ಥಿತರಿದ್ದರು.

ಮೊಹಮ್ಮದ್ ಮುಬೀನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ನುಡಿದರು. ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಕಾರ್ಯದರ್ಶಿ ಮುಝಮ್ಮಿಲ್  ಅಹ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News