ಕಾರ್ಕಳ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ರಜತ‌ ಮಹೋತ್ಸವ

Update: 2020-02-22 11:51 GMT

ಕಾರ್ಕಳ : ಭಾಷೆ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳು. ಭಾಷೆ ‌ಕಳೆದು ಕೊಂಡರೆ ಸಂಸ್ಕೃತಿ‌ ಕಳೆದು ಕೊಂಡಂತೆ. ಪರಸ್ಪರ ‌ಬಾಷೆ‌ ಹೆಸರಿನಲ್ಲಿ ಎತ್ತಿಕಟ್ಟುವ ಕೆಲಸ‌ ಹಾಗೂ ಭಾಷಾ ಸಂಘರ್ಷಗಳು , ಪ್ರಾದೇಶಿಕ ‌ಹೆಸರಿನಲ್ಲಿ ಸಂಘರ್ಷ ಹುಟ್ಟು ಹಾಕುವಂತಹ‌ ಸಂಚು ನಮ್ಮಲ್ಲಿ ‌ಹೆಚ್ಚಾಗಿದೆ. ಅದ್ದರಿಂದ ಭಾಷೆಯನ್ನು ‌ಉಳಿಸುವ ಜತೆ ಬೆಳೆಸಬೇಕು ಎಂದು ಕನ್ನಡ ಸಂಸ್ಕೃತಿ ಸಚಿವ ಸಿಟಿ ರವಿ‌ ಹೇಳಿದ್ದಾರೆ.

ಅವರು ಶನಿವಾರ ಎಸ್ .ವಿ.ಟಿ ವಿದ್ಯಾಸಂಸ್ಥೆ ವಠಾರದಲ್ಲಿ ನಡೆದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ರಜತ‌ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವ್ಯಪಾರದ ಉನ್ನತಿಗೆ ಅಧುನಿಕ ಸವಾಲುಗಳನ್ನು ‌ಎದುರಿಸಲು ಅವಶ್ಯಕತೆಗೆ ಕಲಿಯುವುದು ತಪ್ಪಲ್ಲ. ನಮ್ಮ ದೇಶದಲ್ಲಿ 1200ಕ್ಕೂ ಅಧಿಕ ಜನರಾಡುವ ಬಾಷೆಗಳಿವೆ. ಯಾವುದೇ ಭಾಷೆ ಮತ್ತೊಂದು‌‌ ಭಾಷೆಯನ್ನು ‌ಕೊಲ್ಲದೆ. ಭಾಷೆಗಳನ್ನು ಬೆಳೆಯಲು ಕೊಡುಗೆ ನೀಡಿದೆ. ಕೊಂಕಣಿ ಭಾಷೆ ಕನ್ನಡವನ್ನು ಉಳಿಸುವ ಬೆಳೆಸುವ ಪ್ರಯತ್ನ ಮಾಡಿದೆ. ಪರಕೀಯರ ಆಕ್ರಮಣ ‌,ಭಾಷಾವಾರು ಪ್ರಾಂತ್ಯಕ್ಕೂ ಮುನ್ನ ಭಾಷೆ ಕಾರಣಕ್ಕೆ ಯುದ್ದಗಳು ನಡೆದಿಲ್ಲ ಎಂದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ ಕೆ ಜಗದೀಶ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕ ಸಭಾ ಸದಸ್ಯ ಶೋಭಾ ಕರಂದ್ಲಾಜೆ, ಶಾಸಕ ವಿ ಸುನಿಲ್ ಕುಮಾರ್ , ಸಾಮಜಿಕ‌ಕಾರ್ಯಕರ್ತ‌ದಿನೇಶ್ ಕಾಮತ್ ಸೈಂಟ್ ಲಾರೆನ್ಸ್‌ ಬಸಿಲಿಕಾದ ಧರ್ಮಾದ್ಯಕ್ಷರಾದ ವಂದನೀಯ ಜೋಜ್೯ ಡಿ ಸೋಜಾ, ಕೊಂಕಣಿ ಸಾಹಿತಿ ಗೋಕುಲದಾಸ್ ಪ್ರಭು, ಸಂದ್ಯಾ ಪೈ, ಕೆಪಿ ಶೆಣೈ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ ಕೆ ಜಗದೀಶ್ ‌ಪೈ ಸ್ವಾಗತಿಸಿದರು. ರಾಜೇಂದ್ರ ಭಟ್ ನಿರೂಪಿದರು. ಇದೇ ಸಂದರ್ಭದಲ್ಲಿ 25 ಕೊಂಕಣಿ ಸಾಧಕ ರನ್ನು ಸನ್ಮಾನಿಸಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News