ಕಣ್ಣಂಗಾರ್ ಉರೂಸ್‍ಗೆ ಚಾಲನೆ

Update: 2020-02-22 11:56 GMT

ಪಡುಬಿದ್ರಿ: ಕಣ್ಣಂಗಾರ್ ಜುಮಾ ಮಸೀದಿಯ ಮುಂಭಾಗದಲ್ಲಿರುವ ಮೂರು ವರ್ಷಗಳಿಗೊಮ್ಮೆ ನಡೆಯುವ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ ದರ್ಗಾ ಶರೀಫ್ ಕಣ್ಣಂಗಾರ್ ಉರೂಸ್ ಸಮಾರಂಭಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಶುಕ್ರವಾರ ಮಧ್ಯಾಹ್ನ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಧ್ವಜಾರೋಹಣ ನೆವರೇರಿಸಿದರು. ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ದುವಾ ನೆರವೇರಿಸಿದರು.

ರಾತ್ರಿ ನಡೆದ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಪಿ.ಎಮ್. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಿದರು. ಉರೂಸ್ ಸಮಿತಿಯ ಅಧ್ಯಕ್ಷ ಯು.ಕೆ. ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದರ್ಸ್ ವಿದ್ಯಾರ್ಥಿಗಳು ಹೊರತಂದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಯು.ಕೆ. ಮುಹಮ್ಮದ್ ಸಅದಿ ಮುಖ್ಯಪ್ರಭಾಷಣ ಮಾಡಿದರು.

ಹೆಜಮಾಡಿ ಕೋಡಿ ಜುಮಾ ಮಸೀದಿಯ ಖತೀಬ್ ಅಬೂಬಕ್ಕರ್ ಸಿದ್ದೀಕ್ ಮುಸ್ಲಿಯಾರ್. ಕನ್ನಂಗಾರ್ ಹಿಫ್ಲುಲ್ ಕುರ್‍ಆನ್ ಕಾಲೇಜಿನ ಪ್ರಾಂಶುಪಾಲ ಹಾಫಿಳ್ ಮುಹಮ್ಮದ್ ರಝೀಕ್ ಹಿಮಮಿ, ಕನ್ನಂಗಾರ್ ಹಯಾತುಲ್ ಇಸ್ಲಾಂ ಕೇಂದ್ರ ಮದ್ರಸ ಸದರ್ ಮುಅಲ್ಲಿಂ ಎಂ. ಮುಹಮ್ಮದ್ ನಾಸಿರ್ ಸಅದಿ, ಕನ್ನಂಗಾರ್ ಜುಮಾ ಮಸೀದಿಯ ಅಧ್ಯಕ್ಷ ಎಚ್.ಬಿ. ಮುಹಮ್ಮದ್, ಕಿಫಾಯತುಲ್ ಮಸಾಕೀನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಪುತ್ತು, ಮುಸ್ಲಿಮ್ ಜಮಾಅತ್ ರಾಜ್ಯ ನಾಯಕ ಗುಲಾಂ ಮುಹಮ್ಮದ್, ಸ್ಥಳೀಯ ವಿವಿಧ ಮಸೀದಿಯ ಅಧ್ಯಕ್ಷರಾದ ಎಂ.ಎಸ್. ಅಬ್ದುರ್ರಝಾಕ್ ಹಾಜಿ ಕೋಡಿ, ಬಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಹೊಳೆಬದಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹೆಜಮಾಡಿ, ಉರೂಸ್ ಸಮಿತಿಯ ಕಾರ್ಯದರ್ಶಿ ಎಂ.ಎಸ್. ಸಿರಾಜ್, ಇಸ್ಮಾಯಿಲ್ ದೆಹಲಿ  ಉಪಸ್ಥಿತರಿದ್ದರು.

ಸದಸ್ಯ ಎಸ್.ಎಚ್. ಹನೀಫ್ ಕಣ್ಣಂಗಾರ್ ಕಾರ್ಯಕ್ರಮ ನಿರೂಪಿಸಿದರು. ಕಣ್ಣಂಗಾರ್ ಜುಮ್ಮಾ ಮಸೀದಿಯ ಮುದರ್ರಿಸ್ ಮುಹಮ್ಮದ್ ಅಶ್ರಫ್ ಸಖಾಫಿ ಕಿನ್ಯ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News