"ನಿಮ್ಮ ಸೀಟ್ ಸ್ಲೀಪರ್ ಬರ್ತ್ ಅಲ್ಲ"

Update: 2020-02-22 13:48 GMT

ಹೊಸದಿಲ್ಲಿ: ತನ್ನ ಎದುರಿನ ಸಾಲಿನಲ್ಲಿ ಮಹಿಳೆಯೊಬ್ಬರು ಕುಳಿತಿದ್ದ ಸುಖಾಸೀನ ಆಸನಕ್ಕೆ (ರಿಕ್ಲೈನರ್ ಸೀಟ್‍) ಅಮೆರಿಕನ್ ಏರ್‍ಲೈನ್ಸ್ ಪ್ರಯಾಣಿಕರೊಬ್ಬರು ಗುದ್ದಿದ ವೀಡಿಯೋ ವೈರಲ್ ಆದ ನಂತರ ವಿಮಾನ ಪಯಣದ ವೇಳೆ ಸೀಟನ್ನು ರಿಕ್ಲೈನ್‍ಗೊಳಿಸಬೇಕೇ ಬೇಡೆವೇ ಎಂಬ ಕುರಿತು  ನೆಟ್ಟಿಗರಲ್ಲಿ ಗೊಂದಲ ಮೂಡಿರುವಂತೆಯೇ  ಸರಕಾರ  ವಿಮಾನ ಹಾರಾಟದ ವೇಳೆ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಪ್ರಯಾಣಿಕರ ಗಮನಕ್ಕೆ ತಂದಿದೆ.

"ಸ್ವಲ್ಪ ಉತ್ತಮ ನಡೆತೆ ಹಾಗೂ ಗೌರವ ಯಾವತ್ತೂ ಒಳ್ಳೆಯದು, ನಿಮ್ಮ ಸೀಟ್ ಸ್ಲೀಪರ್ ಬರ್ತ್ ಅಲ್ಲ, ಇತರ ಜನರ ಸ್ಥಳದ ಕುರಿತು ನಿರ್ಲಕ್ಷ್ಯಿಸಬೇಡಿ,'' ಎಂದು ನಾಗರಿಕ ವಿಮಾನಯಾನ ಸಚಿವಾಲಯ ಟ್ವೀಟ್ ಮಾಡಿದೆ ಹಾಗೂ ಜತೆಗೆ ವಿಮಾನದಲ್ಲಿನ ರಿಕ್ಲೈನ್ಡ್ ಸೀಟ್ ಚಿತ್ರವನ್ನೂ ಪೋಸ್ಟ್ ಮಾಡಿದೆ

"ನಿಮಗಿರುವ ಸೀಮಿತ ಸ್ಥಳದಲ್ಲಿ ತುಂಬಾ ಒರಗಿಕೊಳ್ಳಬೇಕೆಂದೆನಿಸಿದಲ್ಲ ಅದನ್ನು ಜಾಗರೂಕತೆಯಿಂದ ಮಾಡಿ. ನಿಮ್ಮ ಅಕ್ಕಪಕ್ಕ ಇರುವ ಜನರ ಬಗ್ಗೆ ಯೋಚಿಸಿ, ಯಾರಿಗೂ  ಅವರ ತೊಡೆಗಳಲ್ಲಿ ನಿಮ್ಮ ತಲೆಯಿರುವುದು ಬೇಡ,''ಎಂದೂ ಸಚಿವಾಲಯ ಟ್ವೀಟ್ ಮಾಡಿದೆ.

ಕ್ಯಾಬಿನ್ ಸ್ಟೊರೇಜ್ ಜಾಗದ ವಿಚಾರವಾಗಿಯೂ ಇತರ ಪ್ರಯಾಣಿಕರ ಅನುಕೂಲತೆಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕೆಂದೂ ಸಚಿವಾಲ ಟ್ವೀಟ್ ಒಂದರಲ್ಲಿ ಹೇಳಿದೆ.

ಇತ್ತೀಚೆಗೆ ಮಹಿಳೆಯೊಬ್ಬರು ತನ್ನ ರಿಕ್ಲೈನ್ಡ್ ಸೀಟ್ ಮೇಲೆ ಹಿಂದಿನ ಸೀಟಿನಲ್ಲಿ ಕುಳಿತ ಪ್ರಯಾಣಿಕ ಸತತ ಗುದ್ದುತ್ತಿರುವ ವೀಡಿಯೋ ಟ್ವೀಟ್ ಮಾಡಿ "ನನ್ನ ಹಿಂದೆ ಕುಳಿತಿರುವ ಪ್ರಯಾಣಿಕನ ಹಲ್ಲೆಯನ್ನು ಶೇರ್ ಮಾಡಲು ನಿರ್ಧರಿಸಿದ್ದೇನೆ ಹಾಗೂ ನನಗೆ ಕಾಂಪ್ಲಿಮೆಂಟರಿ ಕಾಕ್ ಟೈಲ್ ಆಫರ್ ಮಾಡಿದ ವಿಮಾನ ಪರಿಚಾರಿಕೆಯ  ಹೆಚ್ಚಿನ ಬೆದರಿಕೆಯನ್ನು ಕೂಡ,'' ಎಂದು ಬರೆದಿದ್ದರು. ಈ ಟ್ವೀಟ್ ಹಾಗೂ ವೀಡಿಯೋ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News